Latest

ಜ. 19ರಂದು ಮಹಿಳಾ ಸಾಂಸ್ಕೃತಿಕ ಉತ್ಸವ

ಪ್ರಗತಿವಾಹಿನಿ ಸುದ್ದಿ, ಕಾರವಾರ  : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ರಂಗ ಮಂದಿರದಲ್ಲಿ ಜ.೧೯ ರಂದು ಬೆಳಗ್ಗೆ ೧೦ಕ್ಕೆ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಶಾಸಕಿ ರೂಪಾಲಿ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪದ್ಮಶ್ರಿ ಪುರಸ್ಕೃತರಾದ ಸುಕ್ರಿ ಬೊಮ್ಮು ಗೌಡ ಹಾಗೂ ತುಳಸಿ ಗೌಡ ಅವರನ್ನು ಸನ್ಮಾನಿಸಲಾಗುತ್ತದೆ. ನಂತರ ವಿವಿಧ ಕಲಾ ತಂಡಗಳಿಂದ ಕೃಷ್ಣ ರಾಸಲೀಲಾ ನೃತ್ಯ, ಭರತ ನಾಟ್ಯ ಸುಗಮ ಸಂಗೀತ, ಪುಗಡಿ ನೃತ್ಯ, ಜನಪದ ಸಂಗೀತ, ಲಾವಣಿ, ಜಾನಪದ ನೃತ್ಯ, ಗಾರುಡಿ ಗೊಂಬೆ ಕುಣಿತ, ಕೋಲಾಟ, ಡಮಾಮಿ ನೃತ್ಯ, ಸೂತ್ರದ ಗೊಂಬೆಯಾಟ, ಡೊಳ್ಳು ಕುಣಿತ, ಸಿದ್ದಿ ಕಟ್ಟಿ ನೃತ್ಯ, ಗೀಗೀ ಪದ/ಲಾವಣಿ, ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಅಲ್ಲದೇ ಮಹಿಳೆಯರಿಗಾಗಿ ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧ ರವರೆಗೆ ಮೆಹಂದಿ, ಚಿತ್ರಕಲಾ ಸ್ಪರ್ಧೆ ಹಾಗೂ ಮಧ್ಯಾಹ್ನ ೨ ರಿಂದ ಸಂಜೆ ೪ ವರೆಗೆ ರಂಗೋಲಿ ಸ್ಪರ್ಧೆ ಎರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಗುವುದು, ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಎನ್.ಜಿ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button