
ಪ್ರಗತಿವಾಹಿನಿ ಸುದ್ದಿ; ರಾಂಚಿ: ಹರ್ಯಾಣದ ಬಳಿಕ ಇದೀಗ ಜಾರ್ಖಂಡ್ ನಲ್ಲಿ ಪೊಲೀಸ್ ಅಧಿಕಾರಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ವಾಹನ ತಪಾಸಣೆಗೆ ತೆರಳಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂಧ್ಯಾ ಟೋಫ್ನೋ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಂಧ್ಯಾ ಅವರನ್ನು ಜಾರ್ಖಂಡ್ ನ ತುಪುದಾನಾ ಪ್ರದೇಶದ ಇನ್ ಚಾರ್ಜ್ ಆಗಿ ನೇಮಿಸಲಾಗಿತ್ತು. ಈ ವೇಳೆ ವಾಹನ ತಪಾಸಣೆ ನಡೆಸಲು ಮುಂದಾದಾಗ ದುಷ್ಕರ್ಮಿಗಳು ಸಬ್ ಇನ್ಸ್ ಪೆಕ್ಟರ್ ಮೇಲೆಯೇ ವಾಹನ ಹರಿಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ರಾಂಚಿ ಎಸ್ ಎಸ್ ಪಿ ಮಾಹಿತಿ ನೀಡಿದ್ದಾರೆ.
ಕಂಬಳ ಖ್ಯಾತಿಯ ಶ್ರೀನಿವಾಸ್ ಗೌಡ ವಿರುದ್ಧ ದೂರು ದಾಖಲು