Kannada NewsKarnataka News

ಗೋಕಾಕ ಪ್ರಚಾರದಲ್ಲಿ ಟೀಂ ಬೆಳಗಾವಿ, ಕಿರಣ್ ಜಾಧವ್ ನೇತೃತ್ವ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಗೋಕಾಕದಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜ್ಯದಲ್ಲಿ ಕೇವಲ 15 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಬೇರೆಲ್ಲ ಕ್ಷೇತ್ರಗಳ ನಾಯಕರೂ ಉಪಚುನಾವಣೆ ಕ್ಷೇತ್ರಗಳಿಗೆ ಲಗ್ಗೆ ಇಟ್ಟಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಜೊತೆಗೆ ಕಿರಣ ಜಾಧವ ಟೀಂ

ಭಾರತೀಯ ಜನತಾ ಪಾರ್ಟಿ, ಜೊತೆಗೆ ಸಂಘ ಪರಿವಾರ ಉಪಚುನಾವಣೆ ಕ್ಷೇತ್ರದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಸಂಘ ಪರಿವಾರದ ಸಾವಿರಾರು ಜನರು ಮನೆ ಮನೆ ಪ್ರಚಾರ ಸೇರಿದಂತೆ ಎಲ್ಲ ರೀತಿಯ ತಂತ್ರ ನಡೆಸುತ್ತಿದ್ದಾರೆ.

ಗೋಕಾಕದಲ್ಲಿ ಬೆಳಗಾವಿಯಿಂದ ತೆರಳಿರುವ ಬಿಜೆಪಿ ಬೆಳಗಾವಿ ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ನೇತೃತ್ವದ ತಂಡ ಸಕ್ರೀಯವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದೆ.

ಭೀಮಶಿ ಜಾರಕಿಹೊಳಿ ಜೊತೆಗೆ ಕಿರಣ ಜಾಧವ ಟೀಂ

ಭಾನುವಾರ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ, ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಆನಂದ ಮಾಮನಿ, ಭೀಮಶಿ ಜಾರಕಿಹೊಳಿ ಮೊದಲಾದವರೊಂದಿಗೆ ಕಿರಣ್ ಜಾಧವ್ ಟೀಂ ವಿಸ್ತ್ರತ ಚರ್ಚೆ ನಡೆಸಿತು. ಪ್ರಚಾರ ನಡೆಸಬೇಕಾದ ಪ್ರದೇಶಗಳು, ಜನರನ್ನು ತಲುಪಬೇಕಾದ ರೀತಿ, ಸ್ಥಳೀಯವಾಗಿ ಸಿಗುವ ಬೆಂಬಲ, ಸ್ಥಳೀಯ ವಿಷಯಗಳ ಕುರಿತು ಚರ್ಚಿಸಿ ತಂತ್ರ ಹೆಣೆಯಲಾಯಿತು.

Home add -Advt
ಆನಂದ ಮಾಮನಿ ಜೊತೆಗೆ ಕಿರಣ ಜಾಧವ ಟೀಂ

ಚುನಾವಣೆಯವರೆಗೆ ಒಂದು ಟೀಮ್ ಗೋಕಾಕಲ್ಲಿ ಬೀಡುಬಿಟ್ಟು ಚುನಾವಣೆ ಪ್ರಚಾರ ಕೆಲಸದಲ್ಲಿ ತೊಡಗಲಿದೆ. ಪ್ರಚಾರಕ್ಕೆ ಬೇರೆ ಬೇರೆ ಕಡೆಯಿಂದ ಕರೆಸಬೇಕಾದ ನಾಯಕರ ಪಟ್ಟಿ ತಯಾರಿಸಿ, ಇವರೊಂದಿಗೆ ಸಂಪರ್ಕ ಸಧಿಸುವ ಕೆಲಸವನ್ನೂ ಈ ಟೀಂ ಮಾಡಲಿದೆ.

 

Related Articles

Back to top button