Kannada NewsLatestNational

*ಅಂಗಾಗ ದಾನ ಮಾಡಿದ 10 ತಿಂಗಳ ಮಗು: ನಾಲ್ವರ ಬದುಕಿಗೆ ಹೊಸಬೆಳಕು ನೀಡಿದ ಕಂದಮ್ಮ*

ಪ್ರಗತಿವಾಹಿನಿ ಸುದ್ದಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 10 ತಿಂಗಳ ಹೆಣ್ಣು ಮಗು  ಅಂಗಾಂಗ ದಾನದಿಂದ ನಾಲ್ಕು ಜನರಿಗೆ ಹೊಸ ಬದುಕು ನೀಡಿದೆ.

ಕೇರಳದ ಕೊಚ್ಚಿಯ ಅಲಿನ್ ಶೆರಿನ್ ಎನ್ನುವ 10 ತಿಂಗಳ ಹೆಣ್ಣು ಮಗು ಅಪಘಾತದಲ್ಲಿ ಮೃತಪಟ್ಟಿದ್ದು ಪೋಷಕರು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅಲಿನ್ ಮಗುವಿನ ಮೂತ್ರಪಿಂಡ, ಯಕೃತ್ತು ಮತ್ತು ಹೃದಯ ಕವಾಟಗಳು ನಾಲ್ವರಿಗೆ ಹೊಸ ಜೀವನವನ್ನು ಕೊಡಲಿವೆ. ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಅಲಿನ್ ಶೆರಿನ್ ಗುರುತಿಸಿಕೊಂಡಿದ್ದಾರೆ. 

Home add -Advt

ಫೆಬ್ರವರಿ 5 ರಂದು ಕೊಟ್ಟಾಯಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣು ಮಗುವಿಗೆ ಬೈನ್‌ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದರು. ವೈದ್ಯರ ತೀವ್ರ ಪ್ರಯತ್ನಗಳ ಹೊರತಾಗಿಯೂ, ಪುಟ್ಟ ಮಗುವನ್ನು ಉಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಂಗಾಂಗ ದಾನ ಎಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Related Articles

Back to top button