Belagavi NewsBelgaum NewsKannada NewsKarnataka NewsLatest
*ಸನ್ ಸ್ಟ್ರೋಕ್ಗೆ ಬೆಳಗಾವಿಯಲ್ಲಿ ವ್ಯಾಪಾರಿ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಲೆ ಬಿಸಿಲಿನ ಜಳ ಹೆಚ್ಚಾಗುತ್ತಿದೆ. ಸನ್ ಸ್ಟ್ರೋಕ್ ಬೆಳಗಾವಿಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎನ್ನಲಾಗಿದೆ.
ಉಗಾರ ಖುರ್ದ ಪಟ್ಟಣದ ವಾರದ ಸಂತೆಯಲ್ಲಿ ಈ ಘಟನೆ ನಡೆದಿದ್ದು, ವರ್ಧಮಾನ ಮಗದುಮ ಮೃತ ದುರ್ದೈವಿಯಾಗಿದ್ದಾರೆ. ಸಂತೆಯಲ್ಲಿ ವ್ಯಾಪಾರದ ಸಮಯದಲ್ಲಿ ಏಕಾಏಕಿ ಕುಸಿದು ಬಿದ್ದಿರುವ ವರ್ಧಮಾನ ಅವರನ್ನು ಕೂಡಲೇ ಆಸ್ಪತ್ರೆಯಗೆ ಸಾಗಿಸಲು ಯತ್ನಿಸಿದರಾದರೂ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



