
ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ; ಮಾತನಾಡುವ ಬರದಲ್ಲಿ ಬಿಜೆಪಿ ಸಾಹಸಕರೊಬ್ಬರು ಸ್ವಪಕ್ಷದ ಶಾಸಕರ ವಿರುದ್ಧವೇ ನಾಲಿಗೆ ಹರಿಬಿಟ್ಟು, ಅಶ್ಲೀಲ ಪದ ಬಳಕೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಮ್ಮ ಪಕ್ಷದ ಶಾಸಕ ಹಾಗೂ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಆ ಲೋಫರ್ ….ಮಗನನ್ನ ಭೇಟಿಯೇ ಆಗಿಲ್ಲ. ಸುಮ್ಮನೇ ನಾನು ಏನೋ ಹೇಳಿದ್ದೀನಿ ಅಂತ ಆರೋಪ ಮಾಡಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ
ಕರ್ನಾಟಕ ಬೇಡ ಜಂಗಮ ಸಮಾಜ ಸಂಘಟನಾ ಕಾರ್ಯದರ್ಶಿ ರೈ ಹಿರೇಮಠ ಎಂಬುವವರ ಜೊತೆ ಮಾತನಾಡಿರುವ ಆಡಿಯೋ ಭಾರಿ ವೈರಲ್ ಆಗಿದೆ. ಶಾಸಕರಾಗಿ, ಸ್ವಪಕ್ಷದ ಶಾಸಕರ ವಿರುದ್ಧ ಈರೀತಿ ಪದ ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಆತ್ಮಹತ್ಯೆಗೆ ಶರಣಾದ ಬಂಡೆ ಮಠದ ಸ್ವಾಮೀಜಿ
https://pragati.taskdun.com/latest/ramanagarabande-muthabasavalinga-swamijisuicide/