Kannada NewsLatestNationalPolitics

*ಚುನಾವಣಾ ಪ್ರಚಾರದ ವಾಹನದ ಮೇಲಿಂದ ಬಿದ್ದ ಸಚಿವರು*

ಪ್ರಗತಿವಾಹಿನಿ ಸುದ್ದಿ; ನಿಜಾಮಾಬಾದ್: ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ರ್ಯಾಲಿ ವೇಳೆ ಅವಘಡವೊಂದು ಸಂಭವಿಸಿದೆ. ಸಚಿವರೊಬ್ಬರು ಚುನಾವಣಾ ರ್ಯಾಲಿಯ ವಾಹನದಿಂದ ಬಿದ್ದ ಘಟನೆ ನಡೆದಿದೆ.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರ, ಸಚಿವ ಕೆ.ಟಿ.ರಾಮರಾವ್ ಚುನಾವಣಾ ಪ್ರಚಾರದ ವಾಹನದಿಂದ ಬಿದ್ದ ಘಟನೆ ನಿಜಾಮಾಬಾದ್ ಜಿಲ್ಲೆಯ ಆರ್ಮೂರಿನಲ್ಲಿ ನಡೆದಿದೆ.

ಸಚಿವ ಕೆ.ಟಿ.ರಾಮರಾವ್ ಅವರು ತಮ್ಮ ತಂಡದೊಂದಿದೆ ಮೆಟಡಾರ್ ವಾಹನದ ಮೇಲೆ ಹತ್ತಿ ಚುನಾವಣಾ ಪ್ರಚಾರಕ್ಕಾಗಿ ಮೆರವಣಿಗೆ ಹೋಗುತ್ತಿದ್ದರು. ವಾಹನದ ಚಾಲಕ ಅಕಸ್ಮಾತ್ ಆಗಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ವಾಹನದ ಮೇಲೆ ನಿಂತಿದ್ದ ಸಚಿವರು ಹಾಗೂ ಅವರ ತಂಡ ಮುಗ್ಗರಿಸಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಚುನಾವಣಾ ಪ್ರಚಾರದ ವಾಹನದ ಮೇಲಿಂದ ಸಚಿವರು ಹಾಗೂ ಇನ್ನಿತರರು ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Home add -Advt


Related Articles

Back to top button