ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ತಾಲೂಕಿನ ನಾವಗಾ ಗ್ರಾಮದ ನಿವಾಸಿ, ಬಿ.ಎಸ್.ಎಫ್ ಯೋಧ ರಾಹುಲ ವಸಂತ ಶಿಂಧೆ (೨೬) ಭಾನುವಾರ ನಸುಕಿನ ಜಾವ ಪಶ್ಚಿಮ ಬಂಗಾಳದಲ್ಲಿ ನೈಟ್ ಡ್ಯೂಟಿ ಮುಗಿಸಿ ತಮ್ಮ ಹೆಡ್ ಕ್ವಾರ್ಟರ್ಸ್ ನತ್ತ ಮರಳುತ್ತಿದ್ದ ಸಂದರ್ಭದಲ್ಲಿ ನಕ್ಸಲ್ ಗುಂಡೇಟಿನಿಂದ ಮೃತಪಟ್ಟಿದ್ದಾರೆ.
ರಾಹುಲ್ ಗೆ ತಂದೆ, ತಾಯಿ, ಓರ್ವ ಸಹೋದರ, ಸಹೋದರಿ ಇದ್ದಾರೆ. ಅವರ ಪಾರ್ಥೀವ ಶರೀರ ಗೋವಾ ಮಾರ್ಗವಾಗಿ ಸೋಮವಾರ ಸ್ವಗ್ರಾಮಕ್ಕೆ ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ.