Belagavi NewsBelgaum NewsKannada NewsKarnataka NewsLatest

*ಕಿತ್ತೂರು ಕರ್ನಾಟಕ ಸೇನೆಯ ಮಹಿಳಾ ಘಟಕ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ಮಹಿಳಾ ಘಟಕವನ್ನು ರಾಜ್ಯಾಧ್ಯಕ್ಷರಾದ ಮಹಾದೇವ ತಳವಾರ ಅವರು ಉದ್ಘಾಟಿಸಿದರು.

ಮಚ್ಚೆ ಗ್ರಾಮದ ಭೈರವನಾಥ ನಗರದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಮಹಿಳಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಮಹಾದೇವ ತಳವಾರ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯೊಂದಿಗೆ ಸಂಘಟಿತರಾಗಿ ನಾಡು ನುಡಿ ನೆಲಜಲ ರಕ್ಷಣೆಗೆ ಮುಂದಾಗಬೇಕು. ಸ್ವಾಭಿಮಾನಿಗಳಾಗಿ ಸಾವಲಂಬಿ ಜೀವನ ನಡೆಸಬೇಕೆಂದು ಕರೆ ನೀಡಿದರು.

ನಾಡು ನುಡಿಗೆ ದಕ್ಕೆಯಾದಾಗ ಜೀವನವನ್ನು ಪಣಕ್ಕಿಟ್ಟು ಹೋರಾಡಲು ಒಗ್ಗಟ್ಟಿನಿಂದ ಸನ್ನದ್ಧರಾಗಬೇಕಾದ ಪರಿಸ್ಥಿತಿ ಬಂದಿದೆ. ಅದಕ್ಕಾಗಿ ನಾವು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಕೊಟ್ರೇಶ್ ಪಟ್ಟಣಶೆಟ್ಟಿ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶೋಭಾ ಮಲಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಶ್ರೀ ಮಿರ್ಜಿ, ಬೆಳಗಾವಿ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಕಮತಗಿ, ಹುಕ್ಕೇರಿ ತಾಲೂಕಿನ ಅಧ್ಯಕ್ಷರಾದ ಅಂಬಿಕಾ ಚಲವಾದಿ ಮತ್ತು ಘಟಕದ ಅಧ್ಯಕ್ಷರಾದ ಮೀನಾಕ್ಷಿ ಬಡಿಗೇರ ಸೇರಿದಂತೆ ವಿವಿಧ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು ಇದೇ ಸಮಯದಲ್ಲಿ ಕಿತ್ತೂರು ಕರ್ನಾಟಕ ಸೇನೆಗೆ ಸೇರ್ಪಡೆಯಾದ ಎಲ್ಲ ಮಹಿಳೆಯರಿಗೂ ಕನ್ನಡ ಶಾಲಿನ ದೀಕ್ಷೆ ನೀಡಿ ಅರಿಶಿಣ ಕುಂಕುಮ ಮತ್ತು ಉಡಿತುಂಬುವ ಮೂಲಕ ಅರ್ಥಪೂರ್ಣವಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.

Home add -Advt


Related Articles

Back to top button