Latest

ಅಂತರ್ಜಾಲದಲ್ಲಿ ರಣಬೀರ್ ಸಿಂಗ್ ಬೆತ್ತಲೆ ಪೋಸ್ ಮಾಯಾಜಾಲ !

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟ ರಣಬೀರ್ ಸಿಂಗ್ ಸಂಪೂರ್ಣ  ಬೆತ್ತಲೆ ಪೋಸ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರ್ಜಾಲವನ್ನೇ ಅಲ್ಲಾಡಿಸಿದ್ದಾರೆ.

‘ಪೇಪರ್’ ನಿಯತಕಾಲಿಕಕ್ಕೆ ನೀಡಿದ ಫೋಟೋಶೂಟ್ ನಲ್ಲಿ ಅವರು ಸಂಪೂರ್ಣ ನಗ್ನರಾಗಿದ್ದಾರೆ. ಟರ್ಕಿಷ್ ರಗ್ ಒಂದರ ಮೇಲೆ ನಾನಾ ರೀತಿಯ ಬೆತ್ತಲೆ ಪೋಸ್ ಗಳನ್ನು ಮೈಚಳಿ ಬಿಟ್ಟು ನೀಡಿದ್ದಾರೆ.

Home add -Advt

ಬರ್ಟ್ ರೇನಾಲ್ಡ್ಸ್ ಅವರಿಂದ ಪ್ರೇರಿತ  ರಣಬೀರ್  ಬರ್ತ್ ಡೇ ಸೂಟ್ ಪೋಸ್ ಗಳನ್ನು ಪಡ್ಡೆ ಯುವಕರು ಬಿಸಿ ಕೇಕ್ ಗಳಂತೆ  ವಿನಿಮಯಿಸಿಕೊಂಡು ಚಕಿತರಾಗುತ್ತಿದ್ದಾರೆ. ಪಬ್ಲಿಕ್ ಆಗಿ ಇಂಥ ಪೋಸ್ ನೀಡಿದ ನಟನ ಧೈರ್ಯ ಕಂಡು ಹುಬ್ಬೇರಿಸುತ್ತಿದ್ದಾರೆ.

ಆದರೆ ಯಾವುದಕ್ಕೂ ಸೊಪ್ಪು ಹಾಕದ ರಣಬೀರ್ “ನಾನು ನಿಜವಾಗಿಯೂ ಸಂಪೂರ್ಣ ಬೆತ್ತಲೆಯಾಗಿ ಪೋಸ್ ನೀಡಿದ್ದೇನೆ. ನಾನು ಸಾವಿರಾರು ಜನರೆದುರು ಬೆತ್ತಲೆಯಾಗಬಲ್ಲೆ” ಎಂದು ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ; ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Related Articles

Back to top button