Latest

ರಸ್ತೆ ಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ; ನಿವೃತ್ತ ಯೋಧ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ರಾಜ್ಯದ ಹಲವು ಜಿಲ್ಲೆಗಳಲ್ಲಿ ರಸ್ತೆಗುಂಡಿಗಳದ್ದೇ ಕಾರುಬಾರು, ಜಿಟಿ ಜಿಟಿ ಮಳೆಯ ನಡುವೆ ರಸ್ತೆ ಗುಂಡಿಗೆ ವಾಹನ ಸವಾರರು ಬಲಿಯಾಗುತ್ತಿದ್ದು, ನಿವೃತ್ತ ಯೋಧರೊಬ್ಬರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕಾರಿಮನೆ ಬಳಿ ನಡೆದಿದೆ.

39 ವರ್ಷದ ಎಸ್.ಎನ್.ಕುಮಾರ್ ಮೃತ ಯೋಧ. ಕುಮಾರ್ ಬೈಕ್ ನಲ್ಲಿ ತನ್ನ ತಂದೆ ಜೊತೆ ತೆರಳುತ್ತಿದ್ದಾಗ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸು ಹೋಗಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದರು. ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಕುಮಾರ್ ಮೇಲೆಯೇ ಹರಿದಿದೆ. ಸ್ಥಳದಲ್ಲೇ ಕುಮಾರ್ ಮೃತಪಟ್ಟಿದ್ದಾರೆ.

Home add -Advt

ಕುಮಾರ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ನಿವೃತ್ತಿ ಪಡೆದು ಬಳಿಕ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮರಾಠಿ ಕಿರುತೆರೆ ನಟಿ ಕಲ್ಯಾಣಿ ಕುರಾಳೆ- ಜಾಧವ ರಸ್ತೆ ಅಪಘಾತದಲ್ಲಿ ಸಾವು

https://pragati.taskdun.com/latest/marathi-tv-actress-kalyani-kurale-dies-in-road-accident/

Related Articles

Back to top button