Latest

ರಾಜಹಂಸಗಡ ಕೋಟೆಯ ಮೇಲೆ ಅಪರೂಪದ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ರಾಜಹಂಸಗಡ (ಬೆಳಗಾವಿ)

ಇಂದು, ಭಾನುವಾರ ಸಂಜೆ ನಿಸರ್ಗ ಸೌಂದರ್ಯದ ರಾಜಹಂಸಗಡ ಕೋಟೆಯ ತುತ್ತ ತುದಿಯ ಮೇಲೆ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಸೇರಿದ್ದ ಸಾವಿರಾರು ಜನ ಏನೇನೋ ಚಟುವಟಿಕೆಯಲ್ಲಿ ತೊಡಗಿದ್ದರು. ದೇಶಸೇವೆಯ ಭಾವನೆ ಹೊರತು ಅವರಲ್ಲಿ ಯಾವುದೇ ಸ್ವಾರ್ಥವಿರಲಿಲ್ಲ. ಎಲ್ಲರದ್ದೂ ಉದ್ದೇಶ ಮಾತ್ರ ಒಂದೇ ಆಗಿತ್ತು. ಅದು ಇದೇ ಏ.23ರಂದು ನಡೆಯಲಿರುವ ದೇಶದ ಅತೀ ದೆೊಡ್ಡ ಹಬ್ಬವನ್ನು ಯಶಸ್ವಿಗೊಳಿಸುವುದು.

Home add -Advt

ಹೌದು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತ್ತು ನಿರ್ಭಯವಾಗಿ ಮತ ಚಲಾಯಿಸುವಂತೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವದು. ಬೆಳಗಾವಿ ವೋಟ್ಸ್ 100% ಸಂಘಟನೆಯ ಸಹಯೋಗದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಈ ಕಾರ್ಯಕ್ರಮ ಸಂಘಟಿಸಿತ್ತು. 

ಸಂಜೆ 4 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಿಂದ ಬೈಕ್ ರ್ಯಾಲಿ, 4.30ಕ್ಕೆ ಆರ್ ಪಿಡಿ ವೃತ್ತದಿಂದ ಸೈಕಲ್ ಜಾಥಾ ನಡೆಯಿತು. ಮಕ್ಕಳಿಂದ ವಯೋವೃದ್ದರವರೆಗೆ, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಅಲ್ಲಿ,  ಮತದಾನದ ಮಹತ್ವ ಸಾರುವ ವಿವಿಧ ಸಂದೆಶ ಹೊತ್ತ ಗಾಳಿಪಟಗಳನ್ನು ಹಾರಿಸಲಾಯಿತು. ಸುಹಾಸ ನೇತೃತ್ವದ ಅಂತಾರಾಷ್ಟ್ರೀಯ ಗಾಳಿಪಟ ಪಟುಗಳು ಭಾಗವಹಿಸಿದ್ದರು. ಹಾಸ್ಯ ಕಲಾವಿದ ರವಿ ಭಜಂತ್ರಿ ಹಾಸ್ಯ ಚಟಾಕಿಗಳ ಮೂಲಕ ಮತದಾನದ ಮಹತ್ವ ಸಾರಿದರು. ಪ್ರೊಬೇಶನರಿ ಐಎಎಸ್ ಅಧಿಕಾರಿ ಭವರಸಿಂಗ್, ಚೈತನ್ಯ ಕುಲಕರ್ಣಿ, ಸಂದೀಪ ನಾಯರ್, ಸಚಿನ್ ಸಬ್ನಿಸ್, ರೋಹಿತ್ ದೇಶಪಾಂಡೆ, ಸತೀಶ ಕುಲಕರ್ಣಿ,  ಲಿಂಗರಾಜ ಜಗಜಂಪಿ, ಕಿರಣ ನಿಪ್ಪಾಣಿಕರ್, ಎಂ.ಕೆ.ಹೆಗಡೆ, ಆನಂದ ಬುಕ್ಕೆಬಾಗಿ, ಅಲ್ಕಾ ಕಾಳೆ, ಸಾರಿಕಾ ನಾಯ್ಕ, ಪ್ರವೀಣ ಪವಾರ, ಪ್ರವೀಣ ಪ್ರಭು, ಅಜಯ ಹೆಡಾ, ದಿಲೀಪ ಚಂಡಕ, ಸುನೀಲ ನಾಡಗೌಡ, ಮುಕುಲ್ ಚೌದರಿ, ಶ್ರೀನಾಥ ಬಸಾಪುರೆ ಮೊದಲಾದವರು ಪಾಲ್ಗೊಂಡಿದ್ದರು. 

Related Articles

Back to top button