Latest

ಅಪ್ಪನಿಗೆ ವೀಡಿಯೋ ಕಳುಹಿಸಿ ಪ್ರಾಣ ಬಿಟ್ಟ ಕೊರೋನಾ ಸೋಂಕಿತ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕೊರೊನಾ ಸೋಂಕಿಗೆ ಬಲಿಯಾಗುವ ಕೆಲವೇ ನಿಮಿಷಗಳ ಮೊದಲು ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ತನ್ನ ತಂದೆಗೆ ಕಳುಹಿಸಿರುವ ಕರುಣಾಜನಕ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.

26 ವರ್ಷದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಶುಕ್ರವಾರ ರಾತ್ರಿ ಯುವಕ ತನ್ನ ತಂದೆ ಸೆಲ್ಫಿ ವಿಡಿಯೋ ಮಾಡಿ ಕಳುಹಿಸಿದ್ದಾನೆ. ವಿಡಿಯೋದಲ್ಲಿ ಆಸ್ಪತ್ರೆಯ ಬೆಡ್ ನಲ್ಲಿ ಯುವಕ ಮಲಗಿ ಮಾತನಾಡಿದ್ದಾನೆ. ವೈದ್ಯರು ವೆಂಟಿಲೇಟರ್ ತೆಗೆದು ಹಾಕಿದ್ದಾರೆ. ಹೀಗಾಗಿ ನನಗೆ ಉಸಿರಾಡಲು ಕಷ್ಟವಾಗುತ್ತಿದೆ ಡ್ಯಾಡಿ ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಮೂರು ಗಂಟೆಗಳಿಂದ ವೈದ್ಯರು ಆಕ್ಸಿಜನ್ ಸಹಾಯ ನೀಡಲು ನಿರಾಕರಿಸುತ್ತಿದ್ದಾರೆ. ಅವರು ವೆಂಟಿಲೇಟರ್ ತೆಗೆದು ಹಾಕಿದ್ದಾರೆ. ಹೀಗಾಗಿ ನನ್ನ ಹೃದಯಬಡಿತ ನಿಂತು ಹೋಗಿದ್ದು, ಸದ್ಯ ಶ್ವಾಸಕೋಶ ಮಾತ್ರ ಕಾರ್ಯನಿರ್ವಹಿಸುತ್ತಿವೆ. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ. ಬೈ ಡ್ಯಾಡಿ, ಬೈ ಆಲ್, ಎಂದು ಯುವಕ ಹೇಳುತ್ತಿರುವ ವಿಡಿಯೋ ಮನಕಲುಕುವಂತಿದೆ.

ಕೊರೊನಾದಿಂದ ಸಾವನ್ನಪ್ಪಿರುವ ಮಗನ ಅಂತ್ಯಸಂಸ್ಕಾರವನ್ನು ತಂದೆಯೇ ನೆರವೇರಿಸಿದ್ದು, ಜೂನ್ 24ರಂದು ತೀವ್ರವಾಗಿ ಬಳಲುತ್ತಿದ್ದ ನನ್ನ ಮಗನನ್ನು ನಗರದಲ್ಲಿರುವ ಚೆಸ್ಟ್ ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು. ಆದರೆ ಇದೀಗ ನಮಗೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

Home add -Advt

Related Articles

Back to top button