Kannada NewsLatestNational

*ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ತಳ್ಳಿ ಪರಾರಿಯಾದ ಕಳ್ಳ; ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ತಳ್ಳಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬೆಂಗಳೂರು-ಮುಂಬೈ ಸಿಎಸ್ ಎಂಟಿ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ವ್ಯಕ್ತಿ ರೈಲಿನಲ್ಲಿ ದರೋಡೆ ಮಾಡಲು ಯತ್ನಿಸಿ ಕಳ್ಳತನ ಮಾಡಿ ಇನ್ನೇನು ಓಡಿ ಹೋಗಬೇಕು ಅನ್ನುವಷ್ಟರಲ್ಲಿ ಮಹಿಳೆ ಆತನನ್ನು ತಡೆದಿದ್ದಳು. ಆಗ ಆತ ಮಹಿಳೆಯನ್ನೇ ರೈಲಿನಿಂದ ತಳ್ಳಿ ಪರಾರಿಯಾಗಿದ್ದ.

Home add -Advt

ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ದಾದರ್ ನಿಂದ ಹೊರಟಾಗ ಓರ್ವ ವ್ಯಕ್ತಿ ಮಹಿಳಾ ಕಂಪಾರ್ಟ್ ಮೆಂಟ್ ಗೆ ಬಂದಿದ್ದ. ಬಳಿಕ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಆಕೆ ಬಳಿ ಇದ್ದ ಬ್ಯಾಗ್ ಕಿತ್ತುಕೊಂಡಿದ್ದ. ಈ ವೇಳೆ ಮಹಿಳೆ ಆತನನ್ನು ತಡೆಯಲು ಯತ್ನಿಸಿದ್ದಾಳೆ. ಈ ವೇಳೆ ಮಹಿಳೆಯನ್ನು ರೈಲಿನಿಂದ ತಳ್ಳಿ ತಾನೂ ಎಸ್ಕೇಪ್ ಆಗಿದ್ದ.

ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಯತ್ನ, ದರೋಡೆ ಮಾಡುವ ಪ್ರಯತ್ನದಲ್ಲಿ ನೋವುಂಟು ಮಾಡಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.


Related Articles

Back to top button