Uncategorized

ಒಂದೆಡೆ ಕಿಡ್ನಿ ಕದ್ದ ಕಳ್ಳರು, ಇನ್ನೊಂದೆಡೆ ಪತಿ ಪರಿತ್ಯಾಗ !

ಪ್ರಗತಿವಾಹಿನಿ ಸುದ್ದಿ, ಪಾಟ್ನಾ: ತನ್ನ ಎರಡೂ ಮೂತ್ರಪಿಂಡಗಳನ್ನು ಕಳೆದುಕೊಂಡಿರುವ ಮಹಿಳೆಯೊಬ್ಬರ ಪತಿ ಆಕೆ ಸತ್ತರೂ ಪರವಾಗಿಲ್ಲ ಎಂದು ಹೇಳಿ ಅವರನ್ನು ತೊರೆದಿರುವ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಿಹಾರದ ಮುಜಪ್ಫರಪುರದಲ್ಲಿ ಈ ಘಟನೆ ನಡೆದಿದೆ. ಸುನೀತಾದೇವಿ (38) ಎಂಬ ಮಹಿಳೆಯೇ ಈ ದುರದೃಷ್ಟೆ. 2022ರ ಸೆಪ್ಟಂಬರ್ 3ರಂದು ಬರಿಯಾರ್‌ಪುರ ಪ್ರದೇಶದ ಅನಧಿಕೃತ ನರ್ಸಿಂಗ್ ಹೋಂ ಶುಭಕಾಂತ್ ಕ್ಲಿನಿಕ್‌ನಲ್ಲಿ ಅವರು ಗರ್ಭಕೋಶ ಚಿಕಿತ್ಸೆಗೆ ಗುರಿಯಾಗಿದ್ದರು. ಆದರೆ ಅಲ್ಲಿ ವೈದ್ಯರಂತೆ ನಟಿಸುವ ಜನರು ಆಕೆಯ ಎರಡೂ ಮೂತ್ರಪಿಂಡಗಳನ್ನು ಕದ್ದಿದ್ದರು.

ಅವರೀಗ ಸಾವು- ಬದುಕಿನ ಮಧ್ಯೆ ಹೋರಾಟದಲ್ಲಿದ್ದಾರೆ. ಈ ಹಂತದಲ್ಲಿ ಅವರಿಗೆ ಅತಿ ಅಗತ್ಯವಾಗಿ ಇರಬೇಕಿದ್ದ ಪತಿ,  ಸುನೀತಾದೇವಿ ಬದುಕಿದ್ದರೂ ಅಥವಾ ಸತ್ತರೂ ಪರವಾಗಿಲ್ಲ, ಎಂದು ಹೇಳಿ ಅವರನ್ನು ತೊರೆದಿದ್ದಾನೆ.

“ನನಗೆ ಮೂವರು ಮಕ್ಕಳಿದ್ದಾರೆ. ನನ್ನ ಪತಿ ಅವರನ್ನು ನನ್ನೊಂದಿಗೆ ಬಿಟ್ಟು ಹೋಗಿದ್ದಾರೆ. ಈಗ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ” ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

Home add -Advt

ಪ್ರಸ್ತುತ ಸುನೀತಾದೇವಿ ಅವರು ಮುಜಪ್ಫರ್‌ಪುರದ ಸರ್ಕಾರಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (SKMCH) ನಿಯಮಿತ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಆದರೆ ಮನೆ ಬಿಡುವವರೆಗೂ ತಮ್ಮನ್ನು ನೋಡಿಕೊಂಡಿದ್ದ ಪತಿಯೂ ಈಗ ಕಷ್ಟಕಾಲದಲ್ಲಿ ಕೈಬಿಟ್ಟು ಹೋಗಿರುವುದು ಅವರ ಬಡ ಕುಟುಂಬಕ್ಕೆ ಆಘಾತ ತಂದೊಡ್ಡಿದೆ.

ಗೋರಖನಾಥ ಮಂದಿರದ ಮೇಲಿನ ದಾಳಿಕೋರನಿಗೆ ಮರಣ ದಂಡನೆ

https://pragati.taskdun.com/death-penalty-for-attacker-of-gorakhnath-temple/

ಮಹಿಳೆಯರು ಹೆಚ್ಚಿನ ಸಾಧನೆಯ ಗುರಿ ಹೊಂದಲಿ: ಡಾ. ಸೋನಾಲಿ ಸರ್ನೋಬತ್

https://pragati.taskdun.com/let-women-aim-for-greater-achievement-dr-sonali-sarnobat/

*ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ; CD ಕೇಸ್ ಸಿಬಿಐಗೆ ವಹಿಸುವಂತೆ ಮನವಿ*

https://pragati.taskdun.com/ramesh-jarakiholicd-casecbicm-basavaraj-bommaimeet/

Related Articles

Back to top button