Belagavi NewsBelgaum News

*ಬೆಳಗಾವಿಯಲ್ಲಿ ಹಾಡಹಗಲೇ ಅಪ್ರಾಪ್ತ ಯುವಕನ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಹಾಡ ಹಲಗಲೇ ಅಪ್ರಾಪ್ತ ಯುವಕನಿಗೆ ಚಾಕು ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾದಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರವಲಯದಲ್ಲಿ ನಡೆದಿದೆ.

17 ವರ್ಷದ ಸೋಹಿಲ್ ಅಹ್ಮದ್ ಕಿತ್ತೂರು ಕೊಲೆಯಾದ ಯುವಕ. ಸೋಹಿಲ್ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ. ಐವರು ಯುವಕರ ಗುಂಪು ಹಾಡಹಗಲೇ ಸೋಹಲ್ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದೆ.

ಘಟನಾ ಸ್ಥಳಕ್ಕೆ ಮುರಗೋಡು ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button