Kannada NewsLatestWorld

*ಎರಡು ವಾರಗಳ ಕದನ ವಿರಾಮ: ಹಾರ್ಮುಜ್ ಜಲಸಂಧಿ ಓಪನ್: ನಿಟ್ಟುಸಿರು ಬಿಟ್ಟ ಅನೇಕ ರಾಷ್ಟ್ರಗಳು*

ಪ್ರಗತಿವಾಹಿನಿ ಸುದ್ದಿ: ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಒಪ್ಪಿಗೆ ಕೊಡುತ್ತಿದ್ದಂತೆ ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅನುಮತಿ ನೀಡಿದ್ದು, ಅನೇಕ ರಾಷ್ಟ್ರಗಳು ನಿಟ್ಟುಸಿರು ಬಿಟ್ಟಿವೆ.

ಹಾರ್ಮುಜ್ ಜಲಸಂಧಿ ಓಪನ್ ಆಗಿದ್ರಿಂದ ಇರಾನ್​ನಿಂದ ತೈಲ ಸಾಗಾಟ ಸುಗಮವಾಗಲಿದೆ. ಭಾರತ ಸೇರಿ ಅನೇಕ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ.  

Home add -Advt

ಕದನ ವಿರಾಮ ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಮತ್ತು ಅಮೆರಿಕದ ಷೇರುಗಳು ಏರಿಕೆಯಾಗಿವೆ.

ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳನ್ನು ಸುರಕ್ಷಿತವಾಗಿ ಹಾದುಹೋಗಲು ಅನುಮತಿಸಿದರೆ ಮಿಲಿಟರಿ ಕ್ರಮವನ್ನು ನಿಲ್ಲಿಸಬಹುದು ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದರು. ಇದೀಗ ಇರಾನ್ ಅದಕ್ಕೆ ಒಪ್ಪಿಕೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಎರಡು ವಾರಗಳ ಅವಧಿಗೆ ತೆರೆಯಲಾಗುವುದು ಎಂದು ಅರಾಘ್ಚಿ ಘೋಷಿಸಿದ್ದಾರೆ.

Related Articles

Back to top button