Latest
ನೀವು ಮೂರ್ಖರಾಗುವ ಜೊತೆಗೆ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿಸುತ್ತೀರಿ-ಕನ್ನಡ ಚಾನೆಲ್ ಗಳ ವಿರುದ್ಧ ಸಿಎಂ ಕಿಡಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಮುಂಜಾನೆ ಕನ್ನಡ ಟಿವಿ ಚಾನೆಲ್ ಗಳ ವಿರುದ್ಧ ತೀವ್ರವಾಗಿ ಹರಿಹಾಯ್ದರು.
ನೀವು (ಕನ್ನಡ ಚಾನೆಲ್ ಗಳು) ಮನಬಂದಂತೆ ಮಾತನಾಡುತ್ತಿದ್ದೀರಿ. ನಿಮ್ಮ ಚಾನೆಲ್ ಗಳ ಬಗ್ಗೆ ಕರ್ನಾಟಕದ ಜನ ತೀರ್ಮಾನ ತೆಗೆದುಕೊಳ್ಳುವ ಕಾಲ ಬಂದಿದೆ. ನೀವು ಮೂರ್ಖರಾಗುವ ಜೊತೆಗೆ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿಸುತ್ತೀರಿ ಎಂದೆಲ್ಲ ಹರಿಹಾಯ್ದರು.
ಏನೇನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲವಾ, ನಿಮಿಷ ನಿಮಿಷದ ಬೆಳವಣಿಗೆ ಬಗ್ಗೆ ನನಗೆ ಮಾಹಿತಿ ಇದೆ. ನನಗೆ ಎಲ್ಲರೂ ರೀಚಬಲ್ ಇದ್ದಾರೆ, ನಿಮಗೆ ಇಲ್ಲದಿರಬಹುದು. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಬಿಜೆಪಿವರು ಸಂಕ್ರಾಂತಿ ಹಬ್ಬ ಆಚರಿಸಲು ಹೋಗಿರಬಹುದು. ಸುಮ್ಮನೆ ಜನರ ದಾರಿ ತಪ್ಪಿಸಬೇಡಿ ಎಂದು ಹೇಳಿದರು.




