Latest

ಅಶ್ನೀರ್ ಗ್ರೋವರ್ ರಾಜೀನಾಮೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ತಾವೇ ಸ್ಥಾಪಿಸಿದ ಭಾರತ್ ಪೇ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ನಿರ್ದೇಶಕ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ ನೀಡಿದ್ದಾರೆ.

ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಕಂಟ್ರೋಲ್ಸ್ ನ ಮುಖ್ಯಸ್ಥೆ ಹುದ್ದೆಯಿಂದ ಅಶ್ನೀರ್ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ತೆಗೆದುಹಾಕಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತ್ ಪೇ ನಿರ್ದೇಶಕ ಸ್ಥಾನಕ್ಕೆ ಅಶ್ನೀರ್ ರಾಜೀನಾಮೆ ನೀಡಿದ್ದಾರೆ.

ನಾನೇ ಸ್ಥಾಪಿಸಿದ ಕಂಪನಿಗೆ ಬಲವಂತವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಿರುವುದಕ್ಕೆ ಭಾರವಾದ ಹೃದಯದಿಂದ ರಾಜೀನಾಮೆ ಪತ್ರ ಬರೆಯುತ್ತಿದ್ದೇನೆ. ಫಿನ್ ಟೆಕ್ ಜಗತ್ತಿನಲ್ಲಿ ಈ ಕಂಪನಿ ಇಂದು ನಾಯಕ ಸ್ಥಾನದಲ್ಲಿ ನಿಂತಿದೆ ಎಂಬುದನ್ನು ತಲೆ ಎತ್ತಿ ಹೇಳುತ್ತೇನೆ ಎಂದು ಅಶ್ನೀರ್ ಗ್ರೋವರ್ ತಿಳಿಸಿದ್ದಾರೆ.

2022ರ ಆರಂಭದಿಂದಲೂ ನನ್ನ ಹಾಗು ನನ್ನ ಕುಟುಂಬದ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಕೆಲ ವ್ಯಕ್ತಿಗಳು ನನ್ನ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ ಮಾತ್ರವಲ್ಲ ಕಂಪನಿ ವರ್ಚಸ್ಸಿಗೂ ಘಾಸಿ ಮಾಡಲು ಸಿದ್ಧರಾಗಿದ್ದಾರೆ. ಆದರೆ ಮೇಲ್ನೋಟಕ್ಕೆ ಕಂಪನಿ ರಕ್ಷಕರಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

Home add -Advt

ಉಕ್ರೇನ್ ನಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ KSRTCಯಿಂದ ಉಚಿತ ಬಸ್ ವ್ಯವಸ್ಥೆ

Related Articles

Back to top button