Latest

ಪಬ್ ಜಿ ಹುಚ್ಚಾಟ; ಬೆಂಗಳೂರಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಾಲಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಬ್ ಜಿ ಗೇಮ್ ಹುಚ್ಚಿಗೆ ಸಿಲುಕುವ ಮಕ್ಕಳು ಏನೆಲ್ಲ ಅನಾಹುತಗಳನ್ನು ಮಾಡುತ್ತಾರೆ ನೋಡಿ. ಇಲ್ಲೊಬ್ಬ ಬಾಲಕ ಪಬ್ ಜಿ ಗೇಮ್ ಗಾಗಿ ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಬಾಂಬ್ ಕರೆ ಮಾಡಿ ರೈಲನ್ನೆ ತಡೆದು ನಿಲ್ಲಿಸಿದ ಘಟನೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ.

ಯಲಹಂಕ ರೈಲು ನಿಲ್ದಾಣದಿಂದ ಇನ್ನೇನು ಕಾಚಿಗುಡ್ಡ ಎಕ್ಸ್ ಪ್ರೆಸ್ ರೈಲು ಹೊರಡಲಿತ್ತು. ಅಷ್ಟರಲ್ಲಿ ಬಾಲಕನೊಬ್ಬ ರೈಲ್ವೆ ಕಂಟ್ರೋಲ್ ರೂಂ ಗೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ರೈಲನ್ನು ತಡೆದು ಬರೋಬ್ಬರಿ 90 ನಿಮಿಷಗಳ ಕಾಲ ತಪಾಸಣೆ ನಡೆಸಿದ್ದಾರೆ.

Home add -Advt

ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿಯುತ್ತಿದ್ದಂತೆ ಬಾಲಕನನ್ನು ವಿಚಾರಿಸಿದ್ದಾರೆ. ತನ್ನ ಪಬ್ ಜಿ ಪಾರ್ಟ್ನರ್ ಸ್ನೇಹಿತ ಇದೇ ರೈಲಿನಲ್ಲಿ ಊರಿಗೆ ಹೋಗುತ್ತಿದ್ದ. ಆತನನ್ನು ತಡೆಯಲು ಹೀಗೆ ಮಾಡಿದ್ದಾಗಿ ತಿಳಿಸಿದ್ದಾನೆ. ಬುದ್ಧಿವಾದ ಹೇಳಿದ ಪೊಲೀಸರು ಅಪ್ರಾಪ್ತ ಬಾಲಕನಾಗಿದ್ದರಿಂದ ಬಿಟ್ಟು ಕಳುಹಿಸಿದ್ದಾರೆ.

ಯುವತಿಗೆ ಮುತ್ತು ಕೊಟ್ಟವನಿಗೆ 1 ವರ್ಷ ಜೈಲು ಶಿಕ್ಷೆ

Related Articles

Back to top button