National

*ಪಹಲ್ಗಾಮ್ ಅಟ್ಯಾಕ್: ಉಗ್ರರ ಮನೆ ದ್ವಂಸಗೊಳಿಸಿದ ಸೇನೆ*

ಪ್ರಗತಿವಾಹಿನಿ ಸುದ್ದಿ : ಪಹಲ್ಗಾಮ್ ನಲ್ಲಿ ದಾಳಿ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಇಬ್ಬರು ಉಗ್ರರ ನಿವಾಸವನ್ನು ಸಂಪೂರ್ಣ ದ್ವಂಸ ಮಾಡಲಾಗಿದೆ.

ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇದರ ಹೊಣೆಯನ್ನು ಲಷ್ಕರ್-ಎ-ತೊಯ್ದಾದ ಅಂಗ ಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದ್ದು ಇದರಲ್ಲಿ ಕುಖ್ಯಾತ ಲಷ್ಕರ್ ಉಗ್ರ ಆದಿಲ್ ಪ್ರಮುಖ ಪಾತ್ರ ವಹಿಸಿದ್ದ ಎಂದು ದೃಢಪಟ್ಟಿದೆ. 

ಆದಿಲ್ 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿ ಉಗ್ರರಿಂದ ತರಬೇತಿ ಪಡೆದಿದ್ದ. ಇದೀಗ ಆತನ ಮನೆಯನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ. ಇದರ ಜೊತೆಗೆ ದಕ್ಷಿಣ ಕಾಶ್ಮೀರದಲ್ಲಿರುವ ಮತ್ತೋರ್ವ ಉಗ್ರ ಆಸಿಫ್ ಶೇಕ್ ನ ಮನೆಯನ್ನು ಕೂಡ ಸೇನೆ ಕೆಡವಿದೆ. ಕೆಲವು ವರದಿಗಳು ಲಷ್ಕರ್-ಎ-ತೊಯ್ದಾದ ಉನ್ನತ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಈ ದಾಳಿಯ ‘ಮಾಸ್ಟರ್ ಮೈಂಡ್ ಎಂದಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button