Video Player
00:00
00:00
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ತಂದೆಯಿಲ್ಲದ ಚಾಣಾಕ್ಷ ಬಾಲಕಿಯೊಬ್ಬಳ ಶಾಲೆಯ ಶುಲ್ಕ ಭರಿಸುವ ಮೂಲಕ ಬೆಳಗಾವಿಯ ನಿಯತಿ ಫೌಂಡೇಶನ್ ಅವಳ ಶಿಕ್ಷಣಕ್ಕೆ ನೆರವಾಗಿದೆ.
ಇಲ್ಲಿಯ ನಾರ್ವೇಕರ್ ಗಲ್ಲಿಯ 7ನೇ ತರಗತಿಯ ಬಾಲಕಿ ಸೃಷ್ಟಿ ಹನುಮಸೇಠ್ ಬುದ್ದಿವಂತೆ. ಶೇ.97ರಷ್ಟು ಅಂಕ ಪಡೆದಿದ್ದಾಳೆ. ಕಳೆದ ಸಾಲಿನಲ್ಲಿ ಶಾಲಾ ಶುಲ್ಕ ಕಟ್ಟಲಾಗಿರಲಿಲ್ಲ. ತಾಯಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾಳೆ. ಶಾಲೆಯಲ್ಲಿ ಸಮಯಾವಕಾಶ ಪಡೆದು ಮಗಳನ್ನು ಓದಿಸಿದ್ದಳು. ಶಾಲಾ ಆಡಳಿತ ಮಂಡಳಿ ಫಲಿಂತಾಶ ಘೋಷಿಸುವ ಮುನ್ನ ಶುಲ್ಕ ತುಂಬುವಂತೆ ತಿಳಿಸಿತ್ತು.
ಸಾಮಾಜಿಕ ಕಾರ್ಯಕರ್ತೆ ಶಿಲ್ಪಾ ಕೇಕರೆ ಬಾಲಕಿಯ ಪರಿಸ್ಥಿತಿಯನ್ನು ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಅವರಿಗೆ ವಿವರಿಸಿದ್ದರು. ವಿಧವೆಯಾಗಿರುವ ತಾಯಿ ಕಷ್ಟಪಟ್ಟು ಕೆಲಸ ಮಾಡುತ್ತ ಮಗಳನ್ನು ಓದಿಸುತ್ತಿರುವುದನ್ನು ಗಮನಿಸಿದ ಸರ್ನೋಬತ್ ಆಕೆಯ ಶಾಲಾ ಶುಲ್ಕ 8 ಸಾವಿರ ರೂ.ಗಳನ್ನು ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ನಾಗರತ್ನಾ ಚೆಕ್ ಹಸ್ತಾಂತರಿಸಿದರು.
ನಿಯತಿ ಫೌಂಡೇಶನ ಇಂತಹ ಹಲವು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುತ್ತ ಬಂದಿದ್ದು, ಯಾರಾದರೂ ಆರ್ಥಿಕ ಸಹಾಯ ಮಾಡಲು ಆಸಕ್ತಿ ಹೊಂದಿದ್ದರೆ ನಿಯತಿ ಫೌಂಡೇಶನ್ (ಮೊ. 9632613269) ಸಂಪರ್ಕಿಸಲು ಕೋರಲಾಗಿದೆ.