
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರೇಮಕವಿ, ಚಿತ್ರಸಾಹಿತಿ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಸುಖಾಂತ್ಯ ಕಾಣುವ ಲಕ್ಷಣಗಳು ಕಂಡುಬಂದಿವೆ. ವಿಚ್ಛೇದನ ಅರ್ಜಿ ವಾಪಸ್ ಪಡೆಯಲು ಕೆ.ಕಲ್ಯಾಣ್ ಪತ್ನಿ ಅಶ್ವಿನಿ ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಅಶ್ವಿನಿಯವರು, ವಿಚ್ಛೇದನ ಕೋರಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯಕ್ಕೆ ಜೂನ್ 16ರಂದು ಅರ್ಜಿ ಸಲ್ಲಿಸಿದ್ದರು. ಇದೀಗ ಕೌನ್ಸಲಿಂಗ್ ನಿಂದಾಗಿ ಅಶ್ವಿನಿ ತಮ್ಮ ನಿರ್ಧಾರ ಬದಲಿಸಿದ್ದು, ವಿಚ್ಛೇಧನ ಅರ್ಜಿ ವಾಪಸ್ ಪಡೆಯಲು ಮುಂದಾಗಿದ್ದಾರೆ.
ಕೆ.ಕಲ್ಯಾಣ್, ತಮ್ಮ ಪತ್ನಿ ಅಶ್ವಿನಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಬೆಳಗಾವಿಯ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ಮನೆ ಕೆಲಸದವಳಾದ ಗಂಗಾ ಕುಲ್ಕರ್ಣಿ ಹಾಗೂ ಶಿವಾನಂದ ವಾಲಿ ಎಂಬುವವರು ಮಾಟ-ಮಂತ್ರ ಮಾಡಿಸಿ ತಮ್ಮ ದಾಂಪತ್ಯದಲ್ಲಿ ಬಿರುಕುಂಟಾಗುವಂತೆ ಮಾಡಿದ್ದಾರೆ. ಅಶ್ವಿನಿ ಅಕೌಂಟ್ ನಿಂದ ಶಿವಾನಂದ ವಾಲಿ ಅಕೌಂಟ್ ಗೆ ಹಣ ವರ್ಗಾವಣೆಯಾಗಿದೆ ಎಂದು ದೂರು ನೀಡಿದ್ದರು. ಕಲ್ಯಾಣ್ ದೂರಿನ ಹಿನ್ನೆಲೆಯಲ್ಲಿ ಶಿವಾನಂದ ವಾಲಿಯನ್ನು ಪೊಲೀಸರು ಬಂಧಿಸಿದ್ದರು.