Latest

ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ತಂದೆ- ಮಗಳು ಬಲಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ:  ಎಲೆಕ್ನಿಕ್ ಸ್ಕೂಟರ್ ಸ್ಫೋಟಗೊಂಡು ತಂದೆ -ಮಗಳು ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ವೆಲ್ಲೂರಿನಲ್ಲಿ ಗಟನೆ ನಡೆದಿದ್ದು,  ದುರೈ ವರ್ಮಾ(50) ಮತ್ತು ಪ್ರೀತಿ (13) ಮೃತಪಟ್ಟವರು. 

ಬುಧವಾರವಷ್ಟೆ ಖರೀದಿಸಿದ್ದ ಸ್ಕೂಟರ್‌ನ್ನು ಚಾರ್ಜಿಗೆ ಹಾಕಲಾಗಿತ್ತು. ಸ್ವಲ್ಪ ಸಮಯ ಬಿಟ್ಟು ಇಬ್ಬರೂ ಸ್ಕೂಟರ್‌ನತ್ತ ಬಂದಿದ್ದಾರೆ. ಆಗ ಇದ್ದಕ್ಕಿದ್ದಂತೆ ಸ್ಕೂಟರ್ ಸ್ಫೋಟಗೊಂಡಿದೆ. ಹೊತ್ತಿಕೊಂಡ ಬೆಂಕಿಯಿಂದ ಪಕ್ಕದಲ್ಲಿದ್ದ ಇನ್ನೂ ಎರಡು ಸ್ಕೂಟರ್‌ಗಳಿಗೂ ಹಾನಿಯಾಗಿದೆ. ದುರೈ ಅವರ ಮನೆಗೂ ಬೆಂಕಿ ತಗುಲಿದ್ದು, ಅಪ್ಪ ಮಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಸ್ಕೂಟರ್‌ನ ಬ್ಯಾಟರಿ ಓವರ್ ಚಾರ್ಜ್ ಆದ ಹಿನ್ನೆಲೆಯಲ್ಲಿ ಸ್ಕೂಟರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

Home add -Advt

 

Related Articles

Back to top button