Latest

ಮೀಡಿಯಾ ಪಾಲಿಸಿ ಹೆಸರಲ್ಲಿ ಹೊಸ ಪೊಲೀಸ್ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : 

ಪೊಲೀಸ್ ಇಲಾಖೆ ಮೀಡಿಯಾ ಪಾಲಿಸಿ ಹೆಸರಲ್ಲಿ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಪಾರದರ್ಶಕ ಆಡಳಿತಕ್ಕೆ ವ್ಯತಿರಿಕ್ತವಾಗುವ ರೀತಿಯಲ್ಲಿದೆ.

ಪೊಲೀಸರು ಮಾಧ್ಯಮಗ ಚರ್ಚೆಯಲ್ಲಿ ಭಾಗವಹಿಸುವ ಮುನ್ನ ಅನುಮತಿ ಪಡೆಯಬೇಕು ಮತ್ತು ಐಜಿ, ಎಸ್ಪಿ, ಕಮಿಶನರ್ ಅಥವಾ ಅವರಿಂದ ನಿಯೋಜಿಸಲ್ಪಟ್ಟವರನ್ನು ಹೊರತುಪಡಿಸಿ ಬೇರೆ ಯಾರೂ ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.  ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದರೆ ತಕ್ಷಣ ಅಮಾನತು ಮಾಡುವಂತೆ  ತಿಳಿಸಲಾಗಿದೆ.

 ಇದನ್ನು ಎಲ್ಲಾ ಪೊಲೀಸ್ ಆಯುಕ್ತರು,  ಎಸ್ಪಿಗಳಿಗೆ ಕಳುಹಿಸಲಾಗಿದೆ.  ಈ ಆದೇಶದಲ್ಲಿ ಪ್ರಮುಖವಾಗಿ 3 ಉಲ್ಲೇಖಗಳನ್ನು ನೀಡಲಾಗಿದೆ. ಸೂಚನೆಗಳನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಅಮಾನತುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.
ಯಾವುದೇ ಪೂರ್ವಾನುಮತಿ ಇಲ್ಲದೇ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಯಾವುದೇ ಪತ್ರಿಕೆ, ಆಕಾಶಾವಾಣಿ, ದೂರದರ್ಶನ ಅಥವ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾಗವಹಿಸಕೂಡದು.

Home add -Advt

ಇಲಾಖೆಗೆ ಸಂಬಂಧಪಟ್ಟ ಯಾವುದೇ ವಿಷಯಗಳ ವಿವರಗಳನ್ನು ಜಿಲ್ಲಾ ಮಟ್ಟದಲ್ಲಿ ಮಾಧ್ಯಮಗಳಿಗೆ ನೀಡಲು ಆಯಾ ಘಟಕದ ಘಟಕಾಧಿಕಾರಿಗಳಾದ ಪೊಲೀಸ್ ಅಧೀಕ್ಷಕರು/ ಪೊಲೀಸ್ ಆಯುಕ್ತರು/ ವಲಯದ ಐಜಿಪಿ ಅವರು ಅಥವಾ ಅವರುಗಳಿಂದ ಅನುಮೋದನೆಗೊಂಡ ನಂತರ ಸಂಬಂಧಪಟ್ಟ ಘಟಕದ ನೋಡೆಲ್ ಅಧಿಕಾರಿ ಅವರು ಮಾತ್ರ ಮಾಧ್ಯಮಕ್ಕೆ ಮಾಹಿತಿ ನೀಡಲು ಅಧಿಕೃತ ಅಧಿಕಾರಿಗಳಾಗಿರುತ್ತಾರೆ.

 

 

Related Articles

Back to top button