Kannada NewsKarnataka News

ಸಿದ್ದೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿದ ನಿಮಿತ್ತ ಭಜನೆ, ಜಾಗರಣೆ

ಪ್ರಗತಿ ವಾಹಿನಿ ಸುದ್ದಿ, ಬೈಲಹೊಂಗಲ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಪ್ರಯುಕ್ತ ಬೈಲಹೊಂಗಲದ ಹೊಸುರ ಗ್ರಾಮದಲ್ಲಿ ಸೋಮವಾರ ರಾತ್ರಿ ಪೂಜ್ಯರ ಲಿಂಗೈಕ್ಯ ವಿಷಯ ತಿಳಿದ ತಕ್ಷಣ ಗ್ರಾಮದ ಭಜನಾ ಮಂಡಳಿ ಸದಸ್ಯರು ಗ್ರಾಮದ ಎಪಿಎಂಸಿ ಕಟ್ಟಡದ ಮುಂದೆ ಶಾಮಿಯಾನ ಹಾಕಿ ಪೂಜ್ಯರ ಭಾವಚಿತ್ರವನ್ನಿಟ್ಟು ಶ್ರದ್ದಾಂಜಲಿ ಅರ್ಪಿಸಿ ಭಜನೆ ಮಾಡುವದರೊಂದಿಗೆ ಜಾಗರಣೆ ನಡೆಸಿದರು.
 ಮಂಗಳವಾರ ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಆಗಮಿಸಿ ಪೂಜ್ಯರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅಂತಿಮ ಯಾತ್ರೆ ಹೊರಡುವವರೆಗೂ ಗ್ರಾಮದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ತೆ ಮಾಡಲಾಗಿತ್ತು.
*ಗ್ರಾಮಕ್ಕು ಸಿದ್ದೇಶ್ವರ ಶ್ರೀಗಳಿಗೂ ಅವಿನಾಭಾವ ಸಂಬಂಧ:* ದಶಕಗಳ ಹಿಂದೆ ಬೈಲಹೊಂಗಲದಲ್ಲಿ ನಡೆದ ತಿಂಗಳ ಪ್ರವಚನ ಕಾಲದಲ್ಲಿ ಅವರ ವಸ್ತಿ ಹೊಸುರ ಗ್ರಾಮದ ಸಂಗಣ್ಣವರ ತೋಟದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಭಜನೆ, ರಂಗೋಲಿ ಹಾಕಿ ಗ್ರಾಮದ ಹೆಣ್ಣುಮಕ್ಕಳು ಆರತಿ ಎತ್ತುವ ಮೂಲಕ ಪ್ರತಿದಿನ ಅವರಿಗೆ ಸ್ವಾಗತ ಕೋರಿದ ಸಂದರ್ಭ ಎಲ್ಲರನ್ನು ಬೆರಗಾಗುವಂತೆ ಮಾಡಿತ್ತು.
ಒಂದು ತಿಂಗಳ ಪರ್ಯತಂರ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಗ್ರಾಮದ ಹಿರಿಯರು ಚಿರಪರಿಚಿತವಾಗಿದ್ದರು. ಅವರ ಪ್ರವಚನ ಎಲ್ಲೇ ನಡೆದರು ಹೊಸುರ ಗ್ರಾಮಸ್ಥರನ್ನು ಕರೆದು ಅವರ ಆತ್ಮೀಯರಲ್ಲೋಬ್ಬರಾದ ಹಾಗೂ ಜ್ಞಾನಯೋಗಾಶ್ರಮದ ಟ್ರಸ್ಟ್ ಸಂಸ್ಥಾಪಕರಲ್ಲೊಬ್ಬರಾದ ಗಾಂಧೀಜಿ ಅನುಯಾಯಿ ನೀಲಕಂಠಜಿ ಗಣಾಚಾರಿಯವರ ಗ್ರಾಮ ಹೊಸುರದವರು ಎಂದು ಮಾತನಾಡಿಸುತಿದ್ದರು.
ಹೀಗೆ ಗ್ರಾಮದ ಜೋತೆ ಅವರ ಅವಿನಾಭವ ಸಂಬಂಧ ಹೊಂದಿರುವದು ಇತಿಹಾಸದ ಗರ್ಭದಲ್ಲಿ ಅಡಗಿಹೊಯಿತು ಎಂಬ ದುಖಃದ ಛಾಯೆ ಗ್ರಾಮಸ್ಥರನ್ನು ಆವರಿಸಿತ್ತು.
 ಗ್ರಾಮದ ದೇಮಪ್ಪ ಬೂದಿಹಾಳ, ಸೋಮಪ್ಪ ಮುತವಾಡ, ವೀರಣಗೌಡ ಸಂಗಣ್ಣವರ, ಪಿ.ಎನ್.ಗಣಾಚಾರಿ ಎಫ್.ಎಸ್.ಸಿದ್ದನಗೌಡರ, ಬಸವಂತಪ್ಪ ಸಂಗೋಳ್ಳಿ, ಪಿಡಿಓ ಡಿ.ಎಸ್.ಕಣಕನ್ನವರ,
ಮೋಹನ ವಕ್ಕುಂದ, ಈರಣ್ಣ ಸಂಪಗಾಂವ, ಬಸವರಾಜ ಬಾಳೆಕುಂದರಗಿ, ಮಲ್ಲಿಕಾರ್ಜುನ ಕರಡಿಗುದ್ದಿ,ಎನ್.ಸಿ.ಬದ್ರಣ್ಣವರ, ಮೂಗಪ್ಪ ಸೋಗಲ, ಹಣಮಂತ ಭಜಂತ್ರಿ, ಮಡಿವಾಳಪ್ಪ ಇಂಗಳಗಿ, ರಮೇಶ ಆರೇರ, ಅಡಿವೆಪ್ಪ ಹೂಗಾರ, ಮಡಿವಾಳಪ್ಪ ಮುತವಾಡ, ಪುಂಡಲೀಕ ಇಂಗಳಗಿ,  ಮುಂತಾದವರು ಇದ್ದರು.

Related Articles

Back to top button