Kannada NewsKarnataka News

ವಿಧವೆಗೆ ಮರ್ಮಾಂಗ ತೋರಿಸಿ ಒದೆ ತಿಂದ ತಹಸಿಲ್ದಾರ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ.

ಚಿಕ್ಕೋಡಿ ಗ್ರೇಡ್ 2 ತಹಸಿಲ್ದಾರ ಜಮಾದಾರ ಎನ್ನುವಾತ ಮಾನಗೇಡಿ ಕೃತ್ಯ ಮಾಡಿದಾತ.

ತಾಲೂಕಿನ ಮಹಿಳೆಯೊಬ್ಬಳ ಪತಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ತನಗೆ ವಿಧವಾ ಮಾಸಾಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾಳೆ. ಆಕೆಯ ಪುತ್ರ ಈ ಸಂಬಂಧ ಹಲವು ಬಾರಿ ತಹಸಿಲ್ದಾರ ಕಚೇರಿಗೆ ಬಂದಿದ್ದಾನೆ. ಆದರೆ ಕೆಲಸ ಮಾಡಿಕಕೊಡದ ಜಮಾದಾರ, ತಾಯಿಯನ್ನು ಕಚೇರಿಗೆ ಕಳಿಸುವಂತೆ ಸೂಚಿಸಿದ್ದಾನೆ.

ಮಂಗಳವಾರ ತನ್ನ ತಾಯಿಯೊಂದಿಗೆ ಮಗ ಕಚೇರಿಗೆ ಬಂದಾಗ, ಆಕೆಯ ಮಗನ ಹತ್ತಿರ ನೀನು ಹೊರಗೆ ಇರು ಎಂದು ಕಳಿಸಿದ್ದಾನೆ. ಮಗ ಹೊರಗೆ ಹೋದ ನಂತರ ಆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಜಮಾದಾರ, ತನ್ನ ಮರ್ಮಾಂಗ ಪ್ರದರ್ಶಿಸಿದ್ದಾನೆ. ಚೀರುತ್ತ ಹೊರಗೆ ಓಡಿ ಬಂದ ಮಹಿಳೆ ಮಗನಿಗೆ ವಿಷಯ ತಿಳಿಸಿದ್ದಾಳೆ.

Home add -Advt

ನಂತರ ದೊಡ್ಡ ಗಲಾಟೆಯೇ ನಡೆದಿದೆ. ಸಾರ್ವಜನಿಕರೂ ಅಲ್ಲಿಗೆ ಆಗಮಿಸಿ ಆತನಿಗೆ ಒದೆ ನೀಡಿದ್ದಾರೆ. ಈ ಹಿಂದೆ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆಗೂ ಇದೇ ರೀತಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ತಹಸಿಲ್ದಾರ ಪ್ರೀತಂ ಜೈನ್ ಆಗಮಿಸಿ ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿ ತಿಳಿಗೊಳಿಸಿದರು.

ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಆಯ್ಕೆ ಪರೀಕ್ಷೆಗಳಿಗೆ ತಡೆ – ಕೇಂದ್ರದ ಮಹತ್ವದ ನಿರ್ಧಾರ

Related Articles

Back to top button