Latest

ಮಾಜಿ ಮೇಯರ್ ಆಪ್ತನ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್, ಸಂಪತ್ ರಾಜ್ ಅವರ ಆಪ್ತ, ಕಾಂಗ್ರೆಸ್ ಕಾರ್ಯಕರ್ತ ಅರುಣ್ ರಾಜ್ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಅರನ್ನು ಬಂಧಿಸಲಾಗಿದ್ದು, ಗಲಭೆಯಲ್ಲಿ ಅವರ ಪಾತ್ರದ ಬಗ್ಗೆ ಮಾಹಿತಿ ಹಿನ್ನಲೆಯಲ್ಲಿ ಸಿಸಿಬಿ ಅವರ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ತಮಿಳುನಾಡಿನ ಹೊಸೂರಿನವರಾದ ಅರುಣ್ ಕಳೆದ 9 ವರ್ಷಗಳಿಂದ ಸಂಪತ್ ರಾಜ್ ಅವರ ಜತೆಯಲ್ಲಿದ್ದವರು. ಗಲಭೆಯಲ್ಲಿ ಅರುಣ್ ಕೈವಾಡ ಹಾಗೂ ಕಾಂಗ್ರೆಸ್ ಮುಖಂಡರ ಕೈವಾಡವಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಯ ವೇಳೆ ಇನ್ನೊಂದು ಮಾಹಿತಿ ಸಿಕ್ಕಿದ್ದು, ಫೋನಿನಲ್ಲಿ ಮುಜಾಮಿಲ್‌ ಪಾಷಾನೊಂದಿಗೆ ಅರುಣ್‌ ಮಾತನಾಡಿದರೆ ಜೊತೆಯಲ್ಲೇ ಇನ್ನೊಬ್ಬ ವ್ಯಕ್ತಿಯೂ ಮಾತನಾಡಿದ್ದಾರೆ. ಈ ವ್ಯಕ್ತಿಯ ಧ್ವನಿ ಮಾಜಿ ಮೇಯರ್ ಸಂಪತ್‌ ರಾಜ್‌ ಧ್ವನಿಯಂತೆ ಹೋಲಿಕೆ ಇರುವ ಕಾರಣ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

Home add -Advt

ಧ್ವನಿ ಸಂಪತ್‌ ರಾಜ್‌ ಅವರದ್ದೇ ಎನ್ನುವುದು ಪೊಲೀಸ್‌ ಮೂಲಗಳ ಮಾಹಿತಿ. ಆದರೂ ಈ ಬಗ್ಗೆ ಸಂಪೂರ್ಣವಾದ ಸಾಕ್ಷ್ಯ ಸಂಗ್ರಹಿಸಲು ಸಂಪತ್‌ ರಾಜ್‌ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ.

Related Articles

Back to top button