ಬೆಳಗಾವಿ – ಖಾನಾಪುರ ಸಂಪರ್ಕ ರಸ್ತೆ ಮೇಲ್ದರ್ಜೆಗೇರಿಸಲು ತುರ್ತಾಗಿ ಕ್ರಮ ಕೈಗೊಳ್ಳಿ : ನಿತಿನ್ ಗಡಕರಿಗೆ ಡಾ.ಸೋನಾಲಿ ಸರ್ನೋಬತ್ ಪತ್ರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ – ಗೋವಾ- ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ವಾಣಿಜ್ಯ ವ್ಯವಹಾರ ಕೇಂದ್ರವಾಗಿರುವ ಬೆಳಗಾವಿಯಿಂದ ಗೋವಾಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಕೇಂದ್ರ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯು ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೇಂದ್ರ ಜಿಲ್ಲೆಯಾಗಿದೆ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ರೈಲು ಮತ್ತು ವಾಯು ಸಂಪರ್ಕವನ್ನು ಹೊಂದಿರುವ ವ್ಯಾಪಾರ ಕೇಂದ್ರವಾಗಿದೆ. ಗೋವಾದ ಜನರಿಗೆ ವ್ಯಾಪಾರ ವ್ಯವಹಾರಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ.
ಬೆಳಗಾವಿ ಕೊಂಕಣ ಬೆಲ್ಟ್‌ಗೆ ಉತ್ತಮ ಚಿಲ್ಲರೆ ಮಾರುಕಟ್ಟೆಯಾಗಿದ್ದು, ರಸ್ತೆ ಮಾರ್ಗವು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಗೋವಾ ರಸ್ತೆ ಕೆಲಸವನ್ನು ತ್ವರಿತಗೊಳಿಸಬೇಕು.
1) ಬೆಳಗಾವಿ-ಚೋರ್ಲಾ-ಗೋವಾ ರಸ್ತೆ.
2) ಬೆಳಗಾವಿ- ಅನ್ಮೋಡ್-ಗೋವಾ ರಸ್ತೆ.
3) MRF ಗೋವಾ ಕಾರ್ಖಾನೆಗೆ ಮೊಲ್ಲೆಮ್ ರಸ್ತೆ ಅಭಿವೃದ್ಧಿ ಹಂತದಲ್ಲಿದೆ, ಆದರೆ ಹೆಚ್ಚಿನ ಪ್ರಗತಿಯಿಲ್ಲ.
4) ಬೆಳಗಾವಿ-ಖಾನಾಪುರ-ರಾಮನಗರ-ಅನೋಮಡ್ -ಮೊಲ್ಲೆಂನಿಂದ ಈ ವಿಸ್ತರಣೆಯಾಗಿದೆ.
5) ಖಾನಾಪುರ, ದೇಸೂರು, ಪೀರನವಾಡಿ ರಸ್ತೆ 90% ಪೂರ್ಣಗೊಂಡಿದ್ದು, ಇನ್ನೂ ಶೇ.10ರಷ್ಟು ಆಗಬೇಕಿದೆ.
6) ಮೊಲ್ಲೆಮ್ ಟು ಅನ್ಮೋಡ್ ಘಾಟ್ ವಿಭಾಗವಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಿಲ್ಲ.
7) ಖಾನಾಪುರ ಕಡೆಗೆ ರಾಮನಗರ ಬೈಪಾಸ್ ಮೇಲ್ಸೇತುವೆ ಪೂರ್ಣಗೊಳ್ಳಬೇಕಿದೆ.
8) ಖಾನಾಪುರದ ರಿಡ್ಜ್ ಕಾಮಗಾರಿ ನಿಧಾನ ಗತಿಯಲ್ಲಿದೆ.
9) ಹೈದರಾಬಾದ್-ಬೆಳಗಾವಿ-ಗೋವಾ ಎಕ್ಸ್‌ಪ್ರೆಸ್ ಮಾರ್ಗ. ಇದು ಚೋರ್ಲಾ ಮೂಲಕ NHAI ಮಿಷನ್ ಅಡಿಯಲ್ಲಿದೆ. ಇದು ಅತ್ಯಂತ ಕಡಿಮೆ ಮಾರ್ಗವಾಗಿದೆ, ಇದು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಮತ್ತು ಗೋವಾಕ್ಕೆ ತ್ವರಿತ ಮಾರ್ಗವನ್ನು ನೀಡುತ್ತದೆ.
ಹಾಗಾಗಿ ಈ ಎಲ್ಲ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕಿದೆ ಎಂದು ಪತ್ರದಲ್ಲಿ ಕೋರಿದ್ದಾರೆ.
ಪತ್ರದ ಪ್ರತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ ಅವರಿಗೂ ಕಳಿಸಿದ್ದಾರೆ.
ಅತಿವೃಷ್ಟಿ: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ