Kannada NewsKarnataka NewsLatest
*BREAKING: ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು: ತೀರ್ಥರೂಪಿಣಿಯಾಗಿ ಹರಿದ ಜೀವನದಿ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಗಂಗೆ, ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವವಾಗಿದ್ದು, ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ಉಕ್ಕಿ ಹರಿದಿದ್ದಾಳೆ, ಲಕ್ಷಾಂತರ ಭಕ್ತರು ಪುಣ್ಯ ಕ್ಷಣಗಳನ್ನು ಕಣ್ತುಂಬಿಕೊಂಡರು.
ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಇಂದು ಮಧ್ಯಾಹ್ನ 1:44ಕ್ಕೆ ತುಲಾ ರಾಶಿ ಮಕರ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಿದ್ದು, ಜೀವನದಿ ಕಾವೇರಿ ತೀರ್ಥರೂಪಿಣಿಯಾಗಿ ಹರಿದಿದ್ದಾಳೆ. ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತರು ಕಾವೇರಿ ತಾಯಿಗೆ ಜಯಘೋಷಗಳನ್ನು ಕೂಗಿದರು.
ಪವಿತ್ರ ಜೀವಜಲಕ್ಕೆ ಸಹಸ್ರಾರು ಭಕ್ತರು ಭಕ್ತರು ನಮನ ಸಲ್ಲಿಸಿದರು. ಕಾವೇರಿ ತೀರ್ಥವನ್ನು ಪಡೆದು ಪುನೀತರಾದರು.