ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಬಿಗಿಯಾದ ಬಟ್ಟೆ ಧರಿಸಿದ್ದಾಳೆ ಎಂಬ ಕಾರಣಕ್ಕೆ 21 ವರ್ಷದ ಯುವತಿಯನ್ನು ಉಗ್ರರು ಗುಂಡಿಟ್ಟು ಕೊಂದ ಘಟನೆ ಆಪ್ಘಾನಿಸ್ತಾನದ ಬಲ್ಬ್ ಪ್ರಾಂತ್ಯದ ಸಮರ್ ಖಂದ್ ಗ್ರಾಮದಲ್ಲಿ ನಡೆದಿದೆ.
ಮನೆಯಿಂದ ವಾಹನದಲ್ಲಿ ಹೊರಗೆ ಹೋಗುತ್ತಿದ್ದ ಯುವತಿಯನ್ನು ಟೈಟ್ ಆಗಿ ಬಟ್ಟೆ ಧರಿಸಿದ್ದಾಳೆ ಎಂಬ ಕಾರಣಕ್ಕೆ ಉಗ್ರರು ಗುಂಡಿಟ್ಟು ಸಾಯಿಸಿದ್ದಾರೆ. ಮೃತ ಯುವತಿ ನಜಾನಿನ್ ಎಂದು ತಿಳಿದುಬಂದಿದೆ. ಸಮರ್ ಖಂದ್ ಗ್ರಾಮ ತಾಲಿಬಾನ್ ಉಗ್ರರ ಸುಪರ್ದಿಯಲ್ಲಿರುವುದಾಗಿ ಆಪ್ಘಾನಿಸ್ತಾನ ರೆಡಿಯೋ ವರದಿ ಮಾಡಿದೆ.
ಆಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ತಾಲಿಬಾನಿಗಳ ವಿರುದ್ಧ ಸುದ್ದಿ ಮಾಡುತ್ತಿದ್ದ ದ್ಯಾನಿಶ್ ಸಿದ್ದಿಕಿಯನ್ನು ಹತ್ಯೆಗೈದ ಬೆನ್ನಲ್ಲೇ ಸರ್ಕಾರಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥನನ್ನು ಕೊಲೆ ಮಾಡಲಾಗಿದೆ. ಇದೀಗ ಯುವತಿಯೋರ್ವಳನ್ನು ಗುಂಡಿಟ್ಟು ಹತ್ಯೆ ಮಾಡಿರುವುದು ಅಪ್ಘಾನಿಸ್ತಾನವನ್ನು ಬೆಚ್ಚಿ ಬೀಳಿಸಿದೆ.
ಜೆಡಿಎಸ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಜಮೀರ್ ಅಹ್ಮದ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ