Latest

ತಾಲಿಬಾನ್ ಉಗ್ರರ ವಶವಾದ ಆಪ್ಘಾನಿಸ್ತಾನ; ಅಧಿಕಾರ ಹಸ್ತಾಂತರ ಘೋಷಿಸಿದ ಆಶ್ರಫ್ ಘನಿ

ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಆಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಕಾಬೂಲ್ ಗೆ ಎಂಟ್ರಿ ಕೊಟ್ಟಿರುವ ಉಗ್ರರಿಗೆ ಆಫ್ಘಾನ್ ಸರ್ಕಾರ ಶರಣಾಗಿದೆ.

ಕಂದಹಾರ್, ಲಷ್ಕರ್ ವಾಗ್, ಘಾಜ್ನಿಯಂತಹ 18 ಪ್ರಮುಖ ನಗರಗಳನ್ನು ಕೈವಶ ಪಡೆದಿರುವ ತಾಲಿಬಾನ್ ಉಗ್ರರು, ಕಾಬೂಲ್ ಗೆ ಲಗ್ಗೆಯಿಟ್ಟಿದ್ದು, ಕಾಬೂಲ್ ಗೇಟ್ ಬಳಿ ನಾವು ಕಾಯುತ್ತಿದ್ದೇವೆ. ಶಾಂತಿಯುತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ಅಧಿಕಾರ ಹಸ್ತಾಂತರಿಸುವಂತೆ ಉಗ್ರರು ಆಪ್ಘಾನ್ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

Home add -Advt

ಇದೇ ವೇಳೆ ಆಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ನಿವಾಸದಲ್ಲಿ ತಾಲಿಬಾನ್ ಉಗ್ರರ ಜೊತೆ ಮಾತುಕತೆ ನಡೆಸಿದ್ದು, ಅಧಿಕಾರ ಹಸ್ತಾಂತರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ. ಈ ನಡುವೆ ಆಪ್ಘಾನ್ ಆಂತರಿಕ ಸಚಿವಾಲಯ ತಾಲಿಬಾನಿಗಳಿಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಘನಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಧ್ವಜಸ್ತಂಭ ನಿಲ್ಲಿಸುವಾಗ ವಿದ್ಯಾರ್ಥಿ ಸಾವು ಪ್ರಕರಣ; ತನಿಖೆಗೆ ಆದೇಶ

Related Articles

Back to top button