Kannada NewsKarnataka NewsLatest
ಗಂಡ- ಹೆಂಡತಿ ಕಿತ್ತಾಟದಲ್ಲಿ ಕಾರು ಪಲ್ಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾರೊಂದರಲ್ಲಿ ಸಾಗುತ್ತಿದ್ದ ಗಂಡ- ಹೆಂಡತಿ ಕಿತ್ತಾಟದ ಮಧ್ಯೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಮಧ್ಯವೇ ಪಲ್ಟಿ ಹೊಡೆದ ಘಟನೆ ಹಲಸೂರು ಗೇಟ್ ಠಾಣೆ ಸಮೀಪ ನಡೆದಿದೆ.
ಮಾರ್ಕೆಟ್ ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ವೇಳೆ ಗಂಡ- ಹೆಂಡತಿ ಮಾತಿಗೆ ಮಾತು ಬೆಳೆಸಿಕೊಂಡಿದ್ದಾರೆ. ಸಿಟ್ಟಿಗೆದ್ದ ಪತ್ನಿ ಏಕಾಏಕಿ ಕೈ ಹಾಕಿ ಸ್ಟೇರಿಂಗ್ ಎಳೆದಿದ್ದಾಳೆ. ಇದರಿಂದ ನಿಯಂತ್ರಣ ತಪ್ಪಿ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದೆ.
ಆದರೆ ಇಬ್ಬರ ಅದೃಷ್ಟವೂ ಚೆನ್ನಾಗಿದ್ದು ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಹಲಸೂರು ಗೇಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರಿಗೂ ಚಿಕಿತ್ಸೆ ಕೊಡಿಸಿ ತನಿಖೆ ಕೈಗೊಂಡಿದ್ದಾರೆ.


