
ಇವರ ಕೈ ಬೆರಳಿನ ಉದ್ದವೇ ದಂಗುಬಡಿಸುವಂತಿದೆ
ಟರ್ಕಿ –
ಟರ್ಕಿಯ ರುಮೈಸಾ ಗೆಲ್ಗಿ ಪ್ರಸ್ತುತ ಜಗತ್ತಿನ ಅತೀ ಎತ್ತರದ ಮಹಿಳೆ ಎಂಬ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇವರ ಕೈ ಹಾಗೂ ಕೈ ಬೆರಳು ಕೂಡ ದಾಖಲೆ ಬರೆದಿವೆ.
ರುಮೈಸಾ ಅವರು ಬರೋಬ್ಬರಿ ೭ ಅಡಿ ೦.೭ ಇಂಚು ಎತ್ತರವಿದ್ದಾರೆ. ಸಧ್ಯ ಅವರು ವಿಶ್ವದ ಅತೀ ಎತ್ತರದ ಮಹಿಳೆಯಾಗಿದ್ದಾರೆ.
ಅವರ ಕೈ ಬೆರಳು ೪.೪೦ ಇಂಚು ಉದ್ದವಿದ್ದು ವಿಶ್ವದ ಅತೀ ಉದ್ದದ ಬೆರಳು ಹೊಂದಿದ ಮಹಿಳೆ ಎಂಬ ದಾಖಲೆಯೂ ಅವರದ್ದಾಗಿದೆ.
ಅಲ್ಲದೆ ಅವರ ಬಲ ಅಂಗೈ ೯.೮೧ ಇಂಚು ಹಾಗೂ ಎಡ ಅಂಗೈ ೯.೫೫ ಇಂಚು ಉದ್ದವಿದ್ದು ವಿಶ್ವದಲ್ಲಿ ಅತೀ ಉದ್ದದ ಅಂಗೈ ಹೊಂದಿರುವ ಮಹಿಳೆ ಎಂಬ ದಾಖಲೆಯೂ ಅವರದ್ದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ