ಟಾಲಿವುಡ್ ಎದುರು ಧೂಳಿ ಪಟವಾದ ಬಾಲಿವುಡ್; 3ನೇ ಸ್ಥಾನಕ್ಕೆ ಕುಸಿದಿದ್ದೇಕೆ? ಈ ಕುತೂಹಲಕಾರಿ ಸುದ್ದಿ ಓದಿ

ಪ್ರಗತಿವಾಹಿನಿ ಸುದ್ದಿ, ಮುಂಬೈ – ಒಂದು ಕಾಲದಲ್ಲಿ ವಿಶ್ವದಲ್ಲೇ ಜನಪ್ರಿಯ ಚಿತ್ರರಂಗ ಎನಿಸಿದ್ದ ಬಾಲಿವುಡ್ ಈಗ ಗಳಿಕೆಯಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಕೆಳಗೆ ಕುಸಿದಿದೆ. ಪ್ರಸ್ತುತ ಭಾರತದಲ್ಲಿ ಟಾಲಿವುಡ್ ನಂ.೧ ಸ್ಥಾನದಲ್ಲಿದ್ದು ಬಾಲಿವುಡ್ ಮೂರನೇ ಸ್ಥಾನಕ್ಕೆ ಕುಸಿದಿದೆ.

ಬಾಲಿವುಡ್ ಚಲನಚಿತ್ರಗಳನ್ನು ನೋಡಲು ಈಗ ಹೆಚ್ಚಿನ ಜನ ಇಷ್ಟಪಡುತ್ತಿಲ್ಲ. ಬಾಲಿವುಡ್ ಚಿತ್ರಗಳ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿರುವುದಕ್ಕೆ ಇದೇ ಕಾರಣವಾಗಿದೆ. ಆಂದ್ರ ಬಾಕ್ಸ್ ಆಫೀಸ್ ಟ್ವಿಟರ್‌ನಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ೨೦೨೧ರಲ್ಲಿ ಟಾಲಿವುಡ್‌ನ ಒಟ್ಟು ಗಳಿಕೆ ೧೩೦೦ ಕೋಟಿಯಾಗಿದ್ದು ದೇಶದಲ್ಲಿ ಮೊದಲ ಸ್ಥಾನದ ಚಿತ್ರರಂಗವಾಗಿದೆ. ಎರಡನೇ ಸ್ಥಾನದಲ್ಲಿ ಕಾಲಿವುಡ್ ಇದ್ದರೆ ಬಾಲಿವುಡ್‌ನ ಗಳಿಕೆ ಕೇವಲ ೭೦೦ ಕೋಟಿಯಾಗಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ.

ಈ ಹಿಂದೆ ಟಾಲಿವುಡ್‌ನಲ್ಲಿ ತಯಾರಾದ ಚಿತ್ರಗಳನ್ನೇ ರಿಮೇಕ್ ಮಾಡಲು ಬಾಲಿವುಡ್ ನಟರು ಆದ್ಯತೆ ನೀಡುತ್ತಿದ್ದಾರೆ. ದಕ್ಷಿಣದ ಚಿತ್ರಗಳಂತೆಯೇ ಹಿಂದಿ ಪ್ರೇಕ್ಷಕರು ಅವುಗಳನ್ನ ಹಿಂದಿಯಲ್ಲಿ ನೋಡಲು ಇಷ್ಟಪಡುತ್ತಿಲ್ಲ. ಈ ಕಾರಣಕ್ಕಾಗಿಯೇ ಪ್ರೇಕ್ಷಕರು ಈಗ ಬಾಲಿವುಡ್ ಬಿಟ್ಟು ದಕ್ಷಿಣದ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ.

ಪುಷ್ಪ ದಿ ರೈಸ್ ಯಶಸ್ಸು

ಟಾಲಿವುಡ್ ಸಿನಿಮಾಗಳನ್ನು ಈಗ ನಮ್ಮ ದೇಶದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳ ಜನರೂ ನೋಡುತ್ತಿದ್ದಾರೆ. ಇತ್ತೀಚೆಗೆ, ದಕ್ಷಿಣದ ನಟ ಅಲ್ಲು ಅರ್ಜುನ್ ಅವರ ಚಿತ್ರ ಪುಷ್ಪ ದಿ ರೈಸ್ ಸಿನಿಮಾವನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಜನ ನೋಡುತ್ತಿದ್ದಾರೆ. ಈ ಕುರಿತು ಆಂಧ್ರ ಬಾಕ್ಸ್ ಆಫೀಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದೆ. ಕಳೆದ ವರ್ಷ ಟಾಲಿವುಡ್ ಚಿತ್ರಗಳ ಕಲೆಕ್ಷನ್ ೧೩೦೦ ಕೋಟಿ ಆಗಿತ್ತು ಎಂದು ಇದರಲ್ಲಿ ತಿಳಿಸಲಾಗಿದೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪ ದಿ ರೈಸ್ ಚಿತ್ರ ಬಿಡುಗಡೆಗೂ ಮುನ್ನವೇ ಸದ್ದು ಮಾಡಿತ್ತು. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಐದೂ ಭಾಷೆಗಳಲ್ಲಿ ಚಿತ್ರ ತಯಾರಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಇದರೊಂದಿಗೆ, ಇದು ಅನೇಕ ದಾಖಲೆಗಳನ್ನು ಸೃಷ್ಟಿಸಿತ್ತು. ಎಲ್ಲಾ ಐದು ಭಾಷೆಗಳಲ್ಲಿ ೧ ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ ಮೊದಲ ಭಾರತೀಯ ಟ್ರೈಲರ್ ಆಗಿತ್ತು. ವಿಪರ್ಯಾಸವೆಂದರೆ ಕಳೆದ ೩೦ ವರ್ಷಗಳಿಂದ ಚಿತ್ರರಂಗದಲ್ಲಿರುವ ಮೂವರು ಖಾನ್‌ಗಳಿಗೆ ಇದುವರೆಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಕೆಜಿಎಫ್ -2 : ರವೀನಾ ಟಂಡನ್ ಆ ಆಸೆ ಈಡೇರಲೇ ಇಲ್ವಂತೆ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button