
ಪ್ರಗತಿವಾಹಿನಿ ಸುದ್ದಿ: ತನ್ನ ಸಲಿಂಗ ಕಾಮದಾಟಕ್ಕೆ ಮಗು ಅಡ್ದಿಯಾಗುತ್ತದೆ ಎಂಬ ಕಾರಣಕ್ಕೆ 5 ತಿಂಗಳ ಹೆತ್ತ ಕಂದಮ್ಮನನ್ನೇ ತಾಯಿಯೊಬ್ಬಳು ಕೊಲೆಗೈದಿರುವ ಘಟನೆ ನಡೆದಿದೆ.
ತಮಿಳುನಾಡಿನ ಚಿನ್ನಟ್ಟಿಯಲ್ಲಿ ಈ ಘಟನೆ ನಡೆದಿದೆ. ಐದು ತಿಂಗಳ ಹಸುಗಸನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹೆತ್ತ ತಾಯಿಯೇ ಹತ್ಯೆಗೈದಿದ್ದಾಳೆ. ಭಾರತಿ ಮಗುವನ್ನೇ ಕೊಲೆಗೈದಿರುವ ತಾಯಿ.
ಭಾರತಿಗೆ ವಿವಾಹವಾಗಿತ್ತಾದರೂ ಇನ್ನೋರ್ವ ಮಹಿಳೆ ಸುಮಿತ್ರಾಳೊಂದಿಗೆ ಸಲಿಂಗ ಸಂಬಂಧ ಹೊಂದಿದ್ದಳು. ಭಾರತಿ ಹಾಗೂ ಸುಮಿತ್ರಾ ಯಾರಿಗೂ ಗೊತ್ತಾಗದಂತೆ ಸಿಕ್ರೇಟ್ ಆಗಿ ಮತ್ತೊಂದು ಮೊಬೈಲ್ ನ್ನು ಉಪಯೋಗಿಸುತ್ತಿದ್ದರು. ಭಾರತಿ ಮದುವೆಯಾಗಿ ಮಗುವಿದ್ದರೂ ಸುಮಿತ್ರಾ ಜೊತೆ ಸಲಿಂಗ ಸಂಬಂಧ ಮುಂದುವರೆಸಿದ್ದಳು. ಈ ಬಗ್ಗೆ ಭಾರತಿ ಪತಿಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಭಾರತಿಗೆ ಮಗುವಾಗುತ್ತಿದ್ದಂತೆ ಭಾರತಿ ಹಾಗೂ ಸುಮಿತ್ರಾ ನಡುವೆ ಜಗಳವಾಗಿತ್ತು. ಸುಮಿತ್ರಾ, ನಿನಗೆ ಮಗುವಾಗಿದ್ದಕ್ಕೆ ತನ್ನನ್ನು ಅವಾಯ್ಡ್ ಮಾಡುತ್ತಿದ್ದೀಯಾ ತನ್ನಿಂದ ದೂರಾಗುತ್ತಿದ್ದೀಯಾ ಎಂದು ಗಲಾಟೆ ಮಾಡಿದ್ದಳು. ತಮ್ಮಿಬ್ಬರ ಮನಸ್ತಾಪ ಸರಿಯಾಗಬೇಕು ಎಂದರೆ ಮಗು ಇರಬಾರದು ಎಂದಿದ್ದಳಂತೆ.
ಸುಮಿತ್ರಾ ಜೊತೆ ಸಲಿಂಗ ಕಾಮ ಮುಂದುವರೆಸಬೇಕೆಂಬ ಹುಚ್ಚಾಟಕ್ಕೆ ಸಿಲುಕಿದ ಭಾರತಿ ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಪತಿಗೆ ಕರೆ ಮಾಡಿ ಮಗು ಅಸ್ವಸ್ಥವಾಗಿದ್ದಾಗಿ ತಿಳಿಸಿದ್ದಾಳೆ. ತನಿಖೆ ನಡೆಸಿರುವ ಪೊಲೀಸರಿಗೆ ಕೊಲೆ ರಹಸ್ಯ ಬಯಲಾಗಿದೆ. ಭಾರತಿ ಹಾಗೂ ಸುಮಿತ್ರಾ ಇಬ್ಬರನ್ನೂ ಬಂಧಿಸಿದ್ದಾರೆ.



