ಕ್ಷುಲ್ಲಕ ಕಾರಣಕ್ಕಾಗಿ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ

ಚಿಕ್ಕಬಳ್ಳಾಪುರ: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ. ಇಲ್ಲಿನ ಮೇಲ್ ಮರವತ್ತೂರಿನಲ್ಲಿ ಕನ್ನಡಿಗರ ಮೇಲೆ ತಮಿಳಿಗರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ನಗರ ಹಾಗೂ ಯಲಹಂಕ ಬಳಿಯ ಸಿಂಗನಾಯಕನಹಳ್ಳಿಯಿಂದ ಖಾಸಗಿ ಬಸ್ ಮೂಲಕ 53 ಮಂದಿ ಭಕ್ತರು ಮೇಲ್ ಮರವತ್ತೂರಿನ ಆದಿ ಪರಾಶಕ್ತಿ ಶ್ರೀ ಓಂ ಶಕ್ತಿ ದೇವಸ್ಥಾನಕ್ಕೆ ಗುರುವಾರ ತೆರಳಿದ್ದರು. ಶುಕ್ರವಾರ ಬೆಳಗ್ಗೆ ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಪಾರ್ಕಿಂಗ್ ಜಾಗದ ಬಳಿ ತಮಿಳಿಗರು ಕಿರಿಕ್ ಮಾಡಿ, ಕನ್ನಡಿಗರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಮೆರೆದಿದ್ದಾರೆ.

ಪಾರ್ಕಿಂಗ್ ವಿಚಾರಕ್ಕಾಗಿ ತಮಿಳಿಗರು ಕಿರಿಕ್ ತೆಗೆದಿದ್ದಾರೆ. ಮೊದಲು ಚಾಲಕನ ಜೊತೆ ಕಿರಿಕ್ ಮಾಡಿದ್ದಾರೆ. ನಂತರ ಅಲ್ಲಿಂದ ಬಸ್ ತೆಗೆಯಲು ಹೋದಾಗ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆ ಆಗಿದೆ. ಈ ವೇಳೆ ಗಲಾಟೆ ಆರಂಭವಾಗಿದೆ. ಈ ವೇಳೆ ಚಾಲಕ ಹಾಗೂ ತಮಿಳಿಗರ ನಡುವೆ ದೊಡ್ಡ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಚಾಲಕನ ಪರ ಹೋದ ಕನ್ನಡಿಗ ಭಕ್ತರ ಮೇಲೂ 10-15 ಮಂದಿಯ ಗುಂಪು ಹಲ್ಲೆ ನಡೆಸಿ ಬಸ್ ಹತ್ತಿಸಿರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕ ಹಾಗೂ ಕ್ಲೀನರ್ ಗೆ ಮನಸ್ಸೋ ಇಚ್ಛೆ ಕೋಲಿನಿಂದ ಥಳಿಸಿದ್ದಾರೆ. ಭಕ್ತರ ಮೇಲೆಯೂ ಹಲ್ಲೆ ಮಾಡಲಾಗಿದೆ. ಅಲ್ಲಿಂದ ವಾಪಸ್ ಬೆಂಗಳೂರಿಗೆ ಬಂದ ಭಕ್ತರು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲಿ ದೂರು ನೀಡಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button