Latest
ತಮಿಳುನಾಡು ಚುನಾವಣೆ; ರಜನಿಕಾಂತ್-ಕಮಲ್ ಹಾಸನ್ ಮೈತ್ರಿ…?

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಅಖಾಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಮಕ್ಕಳ್ ಸೇವಯ್ ಕಚ್ಚಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ನಟ ಕಮಲ್ ಹಾಸನ್ ರಜನಿಕಾಂತ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ್ ನೀಧಿ ಮಯ್ಯಂ ಪಕ್ಷದ ನಟ ಕಮಲ್ ಹಾಸನ್, ಸೈದ್ಧಾಂತಿಕ ಒಮ್ಮತ ಬೆರೆತರೆ ರಜನಿಕಾಂತ್ ಅವರ ಜೊತೆ ಮೈತ್ರಿಗೆ ಸಿದ್ಧ. ಜನರಿಗೆ ಇದರಿಂದ ಒಳಿತಾಗುವುದಾದರೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ ಕಮಲ್ ತಮ್ಮ ಮಕ್ಕಳ್ ನೀಧಿ ಮಯ್ಯಂ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಈಗಾಗಲೇ ಚುನಾವಣಾ ಪ್ರಚಾರ ಕೂಡ ಆರಂಭಿಸಿದ್ದಾರೆ.
ಈ ಹಿಂದೆ ರಜನಿಕಾಂತ್ ಕೂಡ ತಮಿಳು ಜನರ ಅಭಿವೃದ್ಧಿಗಾಗಿ ಕಮಲ್ ಹಾಸನ್ ಜೊತೆ ಮೈತ್ರಿ ಅನಿವಾರ್ಯವಾದರೆ ತಾವು ರಾಜಕೀಯ ಮೈತ್ರಿಗೆ ಸಿದ್ಧ ಎಂದು ಹೇಳಿಕೆ ನೀಡಿದ್ದರು.




