ಪ್ರಗತಿವಾಹಿನಿ ಸುದ್ದಿ; ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ನಾಯಕ ಎಂ.ಕೆ.ಸ್ಟಾಲಿನ್ ಅಧಿಕಾರ ಸ್ವೀಕರಿಸಿದ್ದು, ಮೊದಲ ದಿನವೇ ರಾಜ್ಯದ ಜನತೆಗೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.
ರೈಸ್ ರೇಷನ್ ಕಾರ್ಡ್ ದಾರರ ಪ್ರತಿ ಕುಟುಂಬಕ್ಕೆ 4,000 ರೂಪಾಯಿ ಸಹಾಯಧನ ಪ್ರಕಟಿಸಿದ್ದು, ಮೊದಲ ಹಂತದ 2,000 ರೂ. ಮೇ ತಿಂಗಳಲ್ಲಿ ಕೋವಿಡ್ ಪರಿಹಾರವಾಗಿ ನೀಡುತ್ತಿರುವುದಾಗಿ ಹಾಗೂ ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದಾಗಿ ತಿಳಿಸಿದ್ದಾರೆ.
ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿರುವ ಸಿಎಂ ಸ್ಟಾಲಿನ್, ಹಾಲಿನ ಪ್ಯಾಕೆಟ್ ದರದಲ್ಲಿ 3 ರೂಪಾಯಿ ಕಡಿತ ಮಾಡಿದ್ದಾರೆ. ಅಲ್ಲದೇ, ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದರೆ ಚಿಕಿತ್ಸಾ ವೆಚ್ಚ ಸಿಎಂ ವಿಮಾ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಚುನಾವನಾ ಪ್ರಚಾರದ ವೇಳೆ ನೀಡಿದ ಭರವಸೆ ಈಡೇರಿಸಲು ಹೊಸ ಸಚಿವಾಲಯವನ್ನೇ ರಚನೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ಭೂಗತಪಾತಕಿ ಛೋಟಾ ರಾಜನ್ ಕೊರೊನಾಗೆ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ