ಪತ್ರ ವಡೆ
ಪತ್ರ ವಡೆ ಸಾಯಂಕಾಲ ಟೀ ಜೊತೆ ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿರುತ್ತದೆ. ಸ್ಪೈಸಿ ಆಗಿರುವ ಪತ್ರ ವಡೆಯನ್ನು ಒಮ್ಮೆ ಮಾಡಿ ತಿಂದರೆ ಮತ್ತೆ ಮತ್ತೆ ಮಾಡಿ ತಿನ್ನಬೇಕೆನ್ನಿಸುತ್ತದೆ.
ಬೇಕಾದ ಸಾಮಗ್ರಿಗಳು:
ದೋಸೆ ಅಕ್ಕಿ 2 ಕಪ್, ತೆಂಗಿನ ತುರಿ 1 ಕಪ್ , ಕೊತ್ತುಂಬ್ರಿ 2 ಚಮಚ, ಅರ್ಧ ಲಿಂಬುಗಾತ್ರದ ಹುಣಸೆ ಹಣ್ಣು, ಕೆಂಪು ಮೆಣಸು 4-5, ಸೂಜಿಮೆಣಸು ಅರ್ಧ ಚಮಚ(ಸೂಜಿಮೆಣಸಿನ ಬದಲು ಕೆಂಪುಮೆಣಸನ್ನೆ 4 ಹೆಚ್ಚಿಗೆ ಹಾಕಬಹುದು.) ಕಡಲೆ ಗಾತ್ರದ ಇಂಗು. ಕಾಲು ಚಮಚ ಓಂಕಾಳು, 7-8 ಕೆಸುವಿನ ಎಲೆ, ರುಚಿಗೆ ಉಪ್ಪು,ಕಡಲೆ ಬೇಳೆ ಅರ್ಧ ಕಪ್.
ಒಗ್ಗರಣೆಗೆ ಎಣ್ಣೆ, ಉದ್ದಿನ ಬೇಳೆ 1 ಚಮಚ, ಸಾಸಿವೆ ಸ್ವಲ್ಪ
ಮಾಡುವ ವಿಧಾನ:
ಅಕ್ಕಿಯನ್ನು ಸ್ವಲ್ಪ ಹುರಿದು 1 ಗಂಟೆ ನೆನೆಸಬೇಕು. ಹಾಗೆ ಕಡಲೆ ಬೇಳೆಯನ್ನು ನೆನಸಬೇಕು. ಅಕ್ಕಿ, ಕೊಬ್ಬರಿ, ಹುಣಸೆಹಣ್ಣು, ಇಂಗು , ಕೊತ್ತುಂಬ್ರಿ, ಮೆಣಸು , ಓಂಕಾಳು, ಕಡಲೆಬೇಳೆಯನ್ನು ಹಾಕಿ ಗಟ್ಟಿಯಾಗಿ ಸ್ವಲ್ಪ ತರಿ ತರಿ ಆಗಿ ರುಬ್ಬಬೇಕು.
ಕೆಸುವಿನ ಎಲೆಯ ಹಿಂಭಾಗಕ್ಕೆ ಹಿಟ್ಟನ್ನು ಸವರಿ ಒಂದರಮೇಲೊಂದನ್ನಿಟ್ಟು ಸುರಳಿ ಸುತ್ತಿ ಉಗಿಯಲ್ಲಿ ಅರ್ಧ ಗಂಟೆ ಬೇಯಿಸಬೇಕು.
ಬೆಂದ ಎಲೆಯ ಸುರುಳಿಯನ್ನು ಹೆಚ್ಚ ಬೇಕು. ಒಗ್ಗರಣೆಗೆ ಎಣ್ಣೆ ಇಟ್ಟು ಇದಕ್ಕೆ ಉದ್ದಿನ ಬೇಳೆ, ಸಾಸಿವೆ ಹಾಕಬೇಕು. ಕೆಂಪಗಾದಮೇಲೆ ಹೆಚ್ಚಿದ ಸುರುಳಿಯನ್ನು ಹಾಕಿ ಸಣ್ಣ ಬೆಂಕಿಯಲ್ಲಿ ಹುರಿಯಬೇಕು. ರುಚಿಕರವಾದ ಪತ್ರ ವಡೆ ಸವಿಯಲು ತಯಾರಾಗಿದೆ.
-ಸಹನಾ ಭಟ್
ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ