ಪ್ರಗತಿವಾಹಿನಿ ಸುದ್ದಿ: 17 ವರ್ಷದ ಅಪ್ರಾಪ್ತಳನ್ನು ಪೂಜ್ಯ ಸ್ಥಾನದಲ್ಲಿರುವ ಶಿಕ್ಷಕನೊಬ್ಬ ಅತ್ಯಾಚಾರವೆಸಗಿರುವ ಹೀನ ಕೃತ್ಯ ನಡೆದಿದೆ.
ತನ್ನದೇ ಶಾಲೆಯ 17 ವರ್ಷದ ಬಾಲಕಿಯನ್ನು ನಂಬಿಸಿ ಬೆಂಗಳೂರು ಸಮೀಪದ ದೇವರಾಯನ ದುರ್ಗಕ್ಕೆ ಕರೆದೊಯ್ದ ಪಿ.ಟಿ ಟೀಚರ್ ದಾದಾಪೀರ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆನಂತರ ಬಾಲಕಿಯನ್ನು ತುಮಕೂರಿನ ಲಾಡ್ಜ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಇದೂ ಸಾಲದೆಂಬಂತೆ ದಾದಾಪೀರ್ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ವಿಷಯ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿಯೂ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಪದೇ ಪದೇ ಬಾಲಕಿಗೆ ಕಿರುಕುಳ ನೀಡಿದ್ದನ್ನು ಸಹಿಸಲಾಗದೇ ಬಾಲಕಿ ಪೋಷಕರಿಗೆ ಘಟನೆ ಕುರಿತು ತಿಳಿಸಿದ್ದಾಳೆ.
ಇದರಿಂದ ಆಘಾತಗೊಂಡ ಪೋಷಕರು ದಬಾಸ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ದಾದಾಪೀರ್‌ನನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ