Karnataka News

*ಆಟವಾಡಿದ್ದಕ್ಕೆ ವಿದ್ಯಾರ್ಥಿಗೆ ಹಲ್ಲು ಮುರಿದ ಶಿಕ್ಷಕಿ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿ ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯನ್ನು ಹೊಡೆದು ಹಲ್ಲು ಮುರಿದಿರುವ ಘಟನೆ ಬೆಂಗಳೂರಿನ ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ ನಡೆದಿದೆ.

ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿ ವಿದ್ಯಾರ್ಥಿಯ ಮುಖಕ್ಕೆ ಕೋಲಿನಿಂದ ಹೊಡೆದು ಹಿಂಸಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕಿ ಹೊಡೆತಕ್ಕೆ ವಿದ್ಯಾರ್ಥಿಯ ಹಲ್ಲು ಮುರಿದಿದೆ.

ಶಿಕ್ಷಕಿ ವಿರುದ್ಧ ಪೋಷಕರು ಜಯನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 6 ನೇತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ ಹಿಂದಿ ಟಿಚರ್ ಅಜ್ಮತ್ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Home add -Advt

Related Articles

Back to top button