ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಸಂಬಂಧ ಹೊಸ ರೂಲ್ಸ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಮೇ 4ರ ವರೆಗೂ ರಾಜ್ಯದ ಎಲ್ಲ ಶಾಲೆ, ಕಾಲೇಜು ಬಂದ್ ಮಾಡಲು ತಿಳಿಸಲಾಗಿದೆ. ಇದರ ಜೊತೆಗೆ ಏ.27ರಿಂದ ಶಿಕ್ಷಕರಿಗೂ ಶಾಲೆಗೆ ಹೋಗುವುದರಿಂದ ವಿನಾಯಿತಿ ನೀಡಲಾಗಿದೆ.
ಮೌಲ್ಯಾಂಕನ ಫಲಿತಾಂಶಗಳನ್ನು ಏಪ್ರಿಲ್ 26ರೊಳಗೆ ಪ್ರಕಟಿಸಿ 27ರಿಂದ ಮೇ 4ರ ವರೆಗೆ ಶಾಲೆಗೆ ಹೊಗುವುದರಿಂದ ವಿನಾಯಿತಿ ಪಡೆಯಬಹುದು. ಆದರೆ ಎಸ್ಎಸ್ಎಲ್ ಸಿ ಬೋಧಕರು ಆನ್ ಲೈನ್, ದೂರವಾಣಿ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸೂಚಿಸಲಾಗಿದೆ.
ಈಗಾಗಲೆ ಮೇ 1ರಿಂದ ಜೂನ್ 15ರ ವರೆಗೆ ಬೇಸಿಗೆ ರಜೆ ನೀಡುವ ಕುರಿತು ಆದೇಶ ಹೊರಬಿದ್ದಿದೆ.
ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ -ಆದೇಶದ ಪ್ರಮುಖ ಅಂಶಗಳು ಇಲ್ಲಿವೆ
ಒಂದೇ ದಿನದಲ್ಲಿ ದಾಖಲೆಯ 2.95 ಲಕ್ಷ ಜನರಲ್ಲಿ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ