Latest

ಶಿಕ್ಷಕರ ಸಮಸ್ಯೆಗಳನ್ನು ಪಟ್ಟಿ ಮಾಡಿದ ಐಟಾ : ಶಿಕ್ಷಣ ಸಚಿವರ ಮುಂದೆ 15 ಬೇಡಿಕೆ ಮಂಡನೆ

ಪ್ರಗತಿವಾಹಿನಿ ಸುದ್ದಿ, ಅಂಕೋಲಾ:  ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಿಕ್ಷಕರ ಮತ್ತು ಶಿಕ್ಷಣ ಇಲಾಖೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳಿಗೆ ಕೂಡಲೆ ಪರಿಹಾರ ಕಂಡುಕೊಂಡು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.

ಶನಿವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಜರುಗಿದ ಉತ್ತರಕನ್ನಡ ಜಿಲ್ಲಾ ಮಹಿಳಾ ಶಿಕ್ಷಕಿಯರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ  ಅವರಿಗೆ ಶಿಕ್ಷಕರ ಸಮಸ್ಯೆಗಳ ಕುರಿತು ಮನವಿ ಪತ್ರವನ್ನು ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಶನ್(ರಿ) ’ಐಟಾ’ವು ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನವನ್ನು ಉನ್ನತೀಕರಿಸಲು, ಅವರನ್ನು ಹೊಣೆಗಾರಿಕೆಗಳ ಕುರಿತು ಸೂಕ್ಷ್ಮಜ್ಞರನ್ನಾಗಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದ ಅವರು, ಇದು ಶಿಕ್ಷಕ ಸಮುದಾಯದ ಒಂದು ಪ್ರಬಲ ಮತ್ತು ವಿಶ್ವಸನೀಯ ರಾಷ್ಟ್ರೀಯ ವೇದಿಕೆಯಾಗಿದೆ. ಇದರ ಮೂಲಭೂತ ಉದ್ದೇಶವು ಶಿಕ್ಷಕರಿಗೆ ಅವರ ಪರಮ ಗುರಿಯನ್ನು ನೆನಪಿಸಿ ಕೊಡುವುದು ಮತ್ತು ಅವರಲ್ಲಿ ಹೊಣೆಗಾರಿಕಾ ಪ್ರಜ್ಞೆಯನ್ನು ಹುಟ್ಟಿಸುವುದು; ಅಂತೆಯೇ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಮತ್ತು ಅವರ ಅರ್ಹ ಹಕ್ಕುಗಳಿಗಾಗಿ ಪರಿಶ್ರಮ ಪಡುವುದಾಗಿದೆ ಎಂದರು.

ಸಮಸ್ಯೆಗಳ ಪಟ್ಟಿ

೧. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಬೇಕು.
೨. ಎಲ್ಲ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು.
೩. ವಿದ್ಯಾರ್ಥಿಗಳು ಆರೋಗ್ಯ ಮತ್ತು ಶಿಸ್ತನ್ನು ಕಾಪಾಡುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹಳ ಮುಖ್ಯ. ಆದ್ದರಿಂದ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಓರ್ವ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.
೪. ಶಾಲೆಗಳು ಪ್ರಾರಂಭಕ್ಕೂ ಪೂರ್ವ ಪಠ್ಯಪುಸ್ತಕಗಳು ಲಭಿಸುವಂತೆ ನೋಡಿಕೊಳ್ಳಬೇಕು.
೫. ಅತಿಥಿ ಶಿಕ್ಷಕಕರನ್ನು ಅಕ್ಟೋಬರ್ ತಿಂಗಳಲ್ಲಿ ನೇಮಿಸದೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನೇಮಕವಾಗುವಂತೆ ಕ್ರಮ ಜರಗಿಸಬೇಕು.
೬. ೧೯೯೫ರಿಂದ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕವಾಗಿರುವುದಿಲ್ಲ. ಕೂಡಲೇ ನಿರ್ಬಂಧವನ್ನು ತೆರವುಗೊಳಿಸಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಹಾಗೂ ೧೯೯೫ ರ ನಂತರ ಆರಂಭಗೊಂಡ ಖಾಸಗಿ ಅನುದಾನರಹಿತ ಪ್ರಾಥಮಿಕ ಪ್ರೌಢಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು.
೭. ಅಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಅನುದಾನ ನೀಡಬೇಕು.
೮. ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸೇವಾಭದ್ರತೆ ಜಾರಿಯಲ್ಲಿದ್ದರೂ ಕೂಡ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಶಿಕ್ಷಕರಿಗೆ ಸೇವಾ ಭದ್ರತೆ ಮತ್ತು ಕಡ್ಡಾಯವಾಗಿ ಕನಿಷ್ಠ ವೇತನ ನೀಡುವಂತೆ ಆಡಳಿತ ಮಂಡಳಿಗಳಿಗೆ ಆದೇಶಿಸಬೇಕು.
೯. ಕೋವಿಡ್ ಪರಿಹಾರಧನವಾಗಿ ಬಿಡುಗಡೆಗೊಳಿಸಿದ ೫೦೦೦ ರೂಗಳನ್ನು ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೂ ಸಿಗುವಂತಾಗಬೇಕು. ಅಲ್ಲದೆ ಮುಂದಿನ ಐದು ವರ್ಷಗಳ ವರೆಗೆ ಪ್ರತಿ ವರ್ಷ ೧೦೦೦೦ ರೂ ಪರಿಹಾರಧನ ಬಿಡುಗಡೆಗೊಳಿಸಬೇಕು.
೧೦. ಈಗಿರುವ ಶಿಕ್ಷಕರ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ ತಂದು ಎಲ್ಲರಿಗೂ ವರ್ಗಾವಣೆಯಲ್ಲಿ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು.
೧೧. ಟಿ.ಇ.ಟಿ ಪರಿಕ್ಷಾರ್ಥಿಗಳಿಗೆ ಅಂಕ ನೀಡುವಲ್ಲಿ ವಿನಾಯತಿ ನೀಡಿದಂತೆ ಸಿ.ಇ.ಟಿ ಪರೀಕ್ಷಾರ್ಥಿಗಳಿಗೂ ಕನಿಷ್ಠ ಪಕ್ಷ ೫ ಅಂಕಗಳಿಗೆ ವಿನಾಯತಿ ನೀಡಬೇಕು.
೧೨. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉರ್ದು ಇಸಿಒ ಹುದ್ದೆಯಿದ್ದು ಉರ್ದುಮಾದ್ಯಮದ ವಿಷಯವಾರು ಇಸಿಒ ಹುದ್ದೆಗಳನ್ನು ಸೃಷ್ಟಿಸಬೇಕು. ಅಲ್ಲದೆ ತಾಲೂಕು ಹಂತದಲ್ಲಿ ಓರ್ವ ಉರ್ದು ವಿಷಯ ಬಲ್ಲ ವ್ಯಕ್ತಿಯನ್ನು ಬಿ.ಆರ್.ಪಿ ಯನ್ನಾಗಿ ನೇಮಕ ಮಾಡಬೇಕು.
೧೩. ರಾಜ್ಯದ ಎಲ್ಲ ಸರ್ಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕು.
೧೪. ಎನ್.ಇ.ಪಿ ಸಮರ್ಪಕ ಜಾರಿಗೊಳಿಸುವಲ್ಲಿ ಶಿಕ್ಷಕರಿಗೆ ತರಬೇತಿ ನೀಡಬೇಕು.
೧೫. ಎನ್.ಇ.ಪಿ ಸ್ವಯಂ ಸೇವಕರನ್ನು/ ಕಾರ್ಯಕರ್ತರನ್ನು ತರಬೇತುಗೊಳಿಸುವಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಶನ್ ಸರ್ಕಾರಕ್ಕೆ ಸಹಕಾರ ನೀಡಲು ಸದಾ ಸಿದ್ದರಿದ್ದು ಉನ್ನತ ಮಟ್ಟದ ಸಭೆಗಳಲ್ಲಿ ಐಟಾದ ಪ್ರತಿನಿಧಿಯನ್ನು ಆಹ್ವಾನಿಸಬೇಕು.

ಮಹಿಳೆಯರಿಬ್ಬರಿಗೆ ಅಪರೂಪದ ಶಸ್ತ್ರ ಚಿಕಿತ್ಸೆ; ಅಪಾಯದಿಂದ ಪಾರು ಮಾಡಿದ ಬಿಮ್ಸ್ ವೈದ್ಯರು

https://pragati.taskdun.com/latest/school-teachers-recruitmentb-c-nageshpressmeet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button