Belagavi NewsBelgaum NewsEducationElection NewsKannada NewsKarnataka NewsNationalPolitics

*ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿರೋಧಿಸಿ ಶಿಕ್ಷಕರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಅಂಗವಿಕಲ ಶಿಕ್ಷಕರನ್ನು, ತೀವ್ರತೆ ಕಾಯಿಲೆ ಇರುವ ಶಿಕ್ಷಕರನ್ನು, ಗರ್ಭಿಣಿ ಶಿಕ್ಷಕಿಯರನ್ನು, ಬಿ ಎಲ್ ಒ ಕೆಸಲಕ್ಕೆ ನಿಯೋಜನೆ ಹೊಂದಿರುವ ಶಿಕ್ಷಕರನ್ನು ಹೀಗೆ ಒಬ್ಬ ಶಿಕ್ಷಕನನ್ನು ಎರಡು ಕೆಲಸಕ್ಕೆ ನೇಮಿಸಲಾಗಿದೆ. ಜೊತೆಗೆ ನಿವೃತ್ತಿ ಸನಿಹದಲ್ಲಿ ಇರುವ ಶಿಕ್ಷರನ್ನು ಸಹನ ಸರ್ವೇ ಕೆಲಸಕ್ಕೆ ನೇಮಿಸಿದ್ದಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. 

ಸರ್ಕಾರ ಸಮೀಕ್ಷೆಗೆ ಸಾವನ್ನಪ್ಪಿದ ಶಿಕ್ಷಕರು, ನಿವೃತ್ತಿ ಹೊಂದಿರುವ ಶಿಕ್ಷಕರು. ವಿಶೇಷ ಚೇತನ ಶಿಕ್ಷಕರು, ವಯಸ್ಸಾದವರು, ಗರ್ಭಿಣಿ ಶಿಕ್ಷಕರನ್ನು ಮೆಡಿಕಲ್ ಸಮಸ್ಯೆ ಇದ್ದವರನ್ನೂ ಸರ್ವೇಗೆ ಆಯ್ಕೆ ಮಾಡಿದ್ದಾರೆ. ನಡೆದಾಡಲು ಆಗದಂತಹ ಶಿಕ್ಷಕರನ್ನು ಸರ್ವೇಗೆ ನೇಮಕ ಮಾಡಿದ್ದಾರೆ. ಜೊತೆಗೆ ಮತದಾರರ ಪಟ್ಟಿ ಪರಿಸ್ಕರಣೆ ಕೆಲಸದಲ್ಲಿ ಇರುವ ಶಿಕ್ಷಕರನ್ನು ಸಹ ಕೆಲಸಕ್ಕೆ ನಿಯೋಜಿಸಲಾಗಿದೆ.‌ ಹಾಗಾಗಿ ನಾವು ಅನಿವಾರ್ಯವಾಗಿ ಸರ್ವೇ ಮಾಡೊದಕ್ಕೆ ಆಗೋದಿಲ್ಲ‌ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿದರೆ ಮಾತ್ರ ಸರ್ವೇ ಮಾಡ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಈ ವೇಳೆ ಜಯಕುಮಾರ ಹೆಬಳಿ, ರಮೇಶ ಗೋಣಿ, ಕೆ ಎಸ್ ರಾಚಣ್ಣವರ, ಬಾಬು ಸೊಗಲನ್ನವರ, ಚಂದ್ರು ಕೋಲ್ಕಾರ, ಶಿವಾನಂದ ರೋಡಬಸಣ್ಣವರ, ಹೊರಕೇರಿ, ಹೈಬತ್ತಿ ರೇಖಾ ಅಂಗಡಿ, ಬೆಳಗಾವಿ ಗ್ರಾಮೀಣ ಮತ್ತು ನಗರದ ಎಲ್ಲಾ ಶಿಕ್ಷಕರು ಸಂಘದ ಪದಾಧಿಕಾರಿಗಳು ಹಾಜರಿದ್ದರು. 

Home add -Advt

Related Articles

Back to top button