Latest

ಶಿಕ್ಷಕರ ನೇಮಕಾತಿ ಹಗರಣ; 30ಕ್ಕೂ ಹೆಚ್ಚು ಶಿಕ್ಷಕರು ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಚಿತ್ರದುರ್ಗ, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ 33 ಶಿಕ್ಷಕರನ್ನು ವಶಕ್ಕೆ ಪಡೆದಿದೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿಯಲ್ಲಿ 2014-15ರಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ದ್ದಾರೆ.

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಶಾಲಾ ಶಿಕ್ಷಕ ಕರಿಬಸಪ್ಪ ಐರಾಣಿ, ಬಾಂಡ್ರಾವಿ ಗ್ರಾಮದ ಶಿಕ್ಷಕಿ ಸವಿತಾ, ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಶಿಕ್ಷಕ ಕೊಟ್ರಪ್ಪ, ಹಿರೇಕಂದವಾಡಿ ಗ್ರಾಮದ ಶಿಕ್ಷಕ ದೀಪಕ್ ಪೂಜಾರಿ, ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಶಾಲಾ ಶಿಕ್ಷಕ ಪಿ.ಏಕಾಂತ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆಯಲ್ಲಿ ಸಿಐಡಿ ಪೊಲೀಸರು ಶಿಕ್ಷಕರಾದ ಯಾಸ್ಮಿನ್ ಅಫ್ಜಾ, ಚಿತ್ರಾ ಬಿ.ಸಿ. ಅಶೋಕ್ ನಾಯಕ್ ಎಂಬುವವರನ್ನು ವಶಕ್ಕೆ ಪಡೆದಿದ್ದರೆ, ಕೋಲಾರದಲ್ಲಿ ಒಟ್ಟು 25 ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಸೆ.6ರಂದು ಸಿಐಡಿ ಅಧಿಕಾರಿಗಳು 12 ಜನರನ್ನು ಬಂಧಿಸಿದ್ದರು. ಇದರ ಬೆನಲ್ಲೇ ತನಿಖೆ ಚುರುಕುಗೊಂಡಿದೆ.

ದೈವ ನರ್ತನ ಮಾಡುವವರಿಗೆ ಮಾಸಾಶನ ಘೋಷಣೆ

https://pragati.taskdun.com/latest/daiva-nartanamasashanaannouncesunil-kumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button