Kannada NewsKarnataka News

ಕನ್ನಡ ರಾಜ್ಯೋತ್ಸವದಲ್ಲಿ ಶಿಕ್ಷಕರು ಹಾಜರಾಗುವುದು ಬೇಡ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ –  : ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಬಾವಿ ಸಭೆಯಲ್ಲಿ ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ  ಭಾಗಿಯಾಗಿದ್ದರು.

ಸಭೆಯಲ್ಲಿ ನೆರದಿದ್ದ ಜನತೆಯ ಮತ್ತು ಮುಖಂಡರ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಶಾಲಾ ಮಕ್ಕಳ ಸಹಭಾಗಿತ್ವ ಬೇಡ, ರೂಪಕ ಅಥವಾ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಕೂಡದು, ಶಾಲಾ ಮುಖ್ಯಾಧ್ಯಾಪಕರಾದಿಯಾಗಿ ಶಿಕ್ಷಕರು ಹಾಜರಾಗುವುದು ಬೇಡ. ಬದಲಿಗೆ ಸಿ.ಆರ್.ಪಿ ಮಾತ್ರ ಹಾಜರಾಗಬಹುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಅಂಜಲಿ ನಿಂಬಾಳಕರ್ ತಿಳಿಸಿದರು.

ತಾಲೂಕಾ ಮಟ್ಟದ ಅಧಿಕಾರಿಗಳು ಮಾತ್ರ ಸಮಾರಂಭದಲ್ಲಿ  ತಪ್ಪದೆ ಭಾಗಿಯಾಗಿ, ಸಾಂಕ್ರಾಮಿಕ ರೋಗ ಕೊರೋನಾ ಮಹಾಮಾರಿಯ ಭಯದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರದ ನಿಯಮಾವಳಿ ಪ್ರಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಸರ್ವ ಮುಖಂಡರು ಮತ್ತು ಸಾರ್ವಜನಿಕರ ಸಲಹೆ ಮೇರೆಗೆ ಆಯೋಜಿತ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು  ಅವರು ತಿಳಿಸಿದರು.

Home add -Advt

Related Articles

Back to top button