Karnataka News

*ಶಾಲಾ ಅನುದಾನದ ಹಣ ದುರ್ಬಳಕೆ: ಮುಖ್ಯಶಿಕ್ಷಕ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಶಾಲಾ ಅನುದಾನದ ಹಣ ದುರ್ಬಳಕೆ, ವಿದ್ಯಾರ್ಥಿಗಳಿಂದ ಹಣ ಪಡೆದ ಆರೋಪದಲ್ಲಿ ಮುಖ್ಯಶಿಕ್ಷಕರೋರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋಲುರು ಪ್ರೌಢ ಶಾಲೆಯ ಮುಖ್ಯಶಿಕ್ಷಕ ಡಿ.ಹೆಚ್.ಅಂಗಡಿ ಅಮಾನತುಗೊಂಡವರು. ಅಟಲ್ ಟಿಂಕರಿಂಗ ಲ್ಯಾಬ್ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಡಿ.ಹೆಚ್.ಅಂಗಡಿ ವಿರುದ್ಧ ಕೇಳಿಬಂದಿತ್ತು.

ಅಲ್ಲದೇ 10ನೇ ತರಗತಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನೀಡಲು 100 ರೂಪಾಯಿ ವಸೂಲಿ ಮಾಡುತ್ತಿದ್ದರು. ವರ್ಗಾವಣೆ ಪತ್ರ ನೀಡಲು ವಿದ್ಯಾರ್ಥಿಗಳಿಂದ 100 ರೂಪಾಯಿ ಪಡೆಯುತ್ತಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಶಿಕ್ಷಕ ಅಂಗಡಿ ಅವರನ್ನು ಅಮಾನತು ಮಾಡಿ ಧಾರವಡ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತಯು ಆದೇಶ ಹೊರಡಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button