ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತನ್ನ ಬದಲಾಗಿ ಶಾಲೆಗೆ ಹೋಗಿ ಪಾಠ ಮಾಡಲು ಬಾಡಿಗೆ ಶಿಕ್ಷಕಿಯನ್ನು ನೇಮಕ ಮಾಡಿ, ಈಗ ಸಸ್ಪೆಂಡ್ ಆಗಿರುವ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಲಿ ತಾಂಡಾದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಅಮಾನತುಗೊಂಡಿರುವ ಶಿಕ್ಷಕ.
ಭಾಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ತರಗತಿಗಳಿದೆ. ಕೇಅವಲ 18 ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರಿದ್ದಾರೆ. ಇಬ್ಬರು ಶಿಕ್ಷಕರಲ್ಲಿ ಮಹೇಂದ್ರ ಕೊಲ್ಲೂರ್ ಕೂಡ ಒಬ್ಬ. ಮಹೇಂದ್ರ ಕೊಲ್ಲೂರ್ ತಾನು ಶಾಲೆಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಮಾಡದೇ ತನ್ನ ಬದಲಿಗೆ ಪದವಿ ಪಡೆದ ಮಹಿಳೆಯೊಬ್ಬರನ್ನು ಶಿಕ್ಷಕಿಯನ್ನಾಗಿ ನೇಮಿಸಿದ್ದು, ಆಕೆಗೆ ತಿಂಗಳಿಗೆ 6 ಸಾವಿರ ರೂಪಾಯಿ ಸಂಬಳ ನೀಡುತ್ತಿದ್ದ.
ಶಿಕ್ಷಕನ ಕರ್ತವ್ಯ ಲೋಪದ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆಅಲ್ಲಿ ಚಿತ್ತಾಪುರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ, ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಶಿಕ್ಷಕ ಮಹೇಂದ್ರ ಕೊಲ್ಲೂರ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ