

ಪ್ರಗತಿವಾಹಿನಿ ಸುದ್ದಿ,*ದುಬೈ:* ಬೌಲರ್‌ಗಳ ಸಂಘಟಿತ ಹೋರಾಟ ಹಾಗೂ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (84ರನ್, 98 ಎಸೆತ, 5 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಇದರೊಂದಿಗೆ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು.
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ನಾಯಕ ಸ್ಟೀವನ್ ಸ್ಮಿತ್ (73) ನೆರವಿನಿಂದ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ತಂಡ 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 ರನ್‌ಗಳಿಸಿ ಗೆಲುವಿನ ದಡ ಸೇರಿತು. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು.
* *ವಿರಾಟ್ ಕೊಹ್ಲಿಗೆ ಶ್ರೇಯಸ್, ರಾಹುಲ್ ಸಾಥ್*
ಆಸೀಸ್ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಕಂಡಿತು. ಯುವ ಬ್ಯಾಟರ್ ಶುಭಮಾನ್ ಗಿಲ್ (8ರನ್) ನಿರಾಸೆ ಕಂಡರೆ, ನಾಯಕ ರೋಹಿತ್ ಶರ್ಮ (28ರನ್) ಸಿಕ್ಕ ಎರಡು ಜೀವದಾನ ಅವಕಾಶಗಳನ್ನು ಕೈಚೆಲ್ಲಿದರು. ಬಳಿಕ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ (45ರನ್) ಜೋಡಿ ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿತು.
ಈ ಜೋಡಿ ೩ನೇ ವಿಕೆಟ್‌ಗೆ 91ರನ್ ಪೇರಿಸುವ ಮೂಲಕ ತಂಡಕ್ಕೆ ಆಸರೆಯಾಯಿತು. ಶ್ರೇಯಸ್ ಅಯ್ಯರ್ ಜಂಪಾ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ಆಲ್ರೌಂಡರ್ ಅಕ್ಷರ್ ಪಟೇಲ್ (27) ಕೆಲಕಾಲ ಕೊಹ್ಲಿ ಜತೆಗೂಡಿದರೆ, ಕೊಹ್ಲಿ ಹಾಗೂ ರಾಹುಲ್ (42*ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್*) ಜೋಡಿ ಆಸೀಸ್ ಬೌಲರ್‌ಗಳ ಸಿಂಹಸ್ವಪ್ನವಾಯಿತು.
ಶತಕದತ್ತ ದಾಪುಗಾಲಿಟ್ಟಿದ್ದ ಕೊಹ್ಲಿ ಜಂಪಾ ಎಸೆತದಲ್ಲಿ ದುಡುಕಿ ಬೆನ್ ದ್ವರ‍್ಸಿಯಸ್‌ಗೆ ಕ್ಯಾಚ್ ನೀಡಿದರು. ಹಾರ್ದಿಕ್ ಪಾಂಡ್ಯ (28) ಆಕರ್ಷಕ ಮೂರು ಸಿಕ್ಸರ್ ಸಿಡಿಸುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
* *ಆಸ್ಟ್ರೇಲಿಯಾಗೆ ಸ್ಮಿತ್ ಆಸರೆ*
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟೆçÃಲಿಯಾ ತಂಡಕ್ಕೆ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಆರಂಭಿಕ ಆಘಾತ ನೀಡಿದರು. ಆರಂಭಿಕ ಬ್ಯಾಟರ್ ಕೂಪರ್ ಕೊನ್ನೆಲ್ಲಿ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. ಟ್ರಾವಿಡ್ ಹೆಡ್ (39ರನ್) ಹಾಗೂ ನಾಯಕ ಸ್ಟೀವನ್ ಸ್ಮಿತ್ ಜೋಡಿ 2ನೇ ವಿಕೆಟ್‌ಗೆ 50ರನ್ ಪೇರಿಸಿ ತಂಡಕ್ಕೆ ಚೇತರಿಕೆ ನೀಡಿತು.
ಅನುಭವಿ ಬ್ಯಾಟಿಂಗ್ ಪಡೆಯನ್ನೇ ಹೊಂದಿದ್ದ ಆಸೀಸ್ ತಂಡಕ್ಕೆ ಭಾರತದ ಬೌಲರ್‌ಗಳು ಕಡಿವಾಣ ಹೇರಿದರು. ನಾಯಕ ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ (61ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಆಸರೆಯಾದರು. ಕಡೆ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅಲೆಕ್ಸ್ ಕ್ಯಾರಿ ತಂಡದ ಮೊತ್ತವನ್ನು 260ರ ಗಡಿ ದಾಟಿಸಲು ನೆರವಾದರು.
*ಸಂಕ್ಷಿಪ್ತ ಸ್ಕೋರ್:*
*ಆಸ್ಟ್ರೇಲಿಯಾ* : 49.3 ಓವರ್‌ಗಳಲ್ಲಿ 264 (ಟ್ರಾವಿಸ್ ಹೆಡ್ 39, ಸ್ಟೀವನ್ ಸ್ಮಿತ್ 73, ಅಲೆಕ್ಸ್ ಕ್ಯಾರಿ 61, ಮೊಹಮದ್ ಶಮಿ 48ಕ್ಕೆ 3, ವರುಣ್ ಚಕ್ರವರ್ತಿ 49ಕ್ಕೆ 2).
*ಭಾರತ* : 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 (ರೋಹಿತ್ ಶರ್ಮ 28, ವಿರಾಟ್ ಕೊಹ್ಲಿ 84, ಶ್ರೇಯಸ್ 45, ಕೆಎಲ್ ರಾಹುಲ್ 42*, ಹಾರ್ದಿಕ್ ಪಾಂಡ್ಯ 28, ಅಕ್ಷರ್ ಪಟೇಲ್ 27, ನಾಥನ್ ಹಿಲ್ಸ್ 49ಕ್ಕೆ 2, ಜಂಪಾ 60ಕ್ಕೆ 2).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ